ಎತ್ತಿನಹೊಳೆ ಜೆಡಿಎಸ್​, ಬಿಜೆಪಿ ಯೋಜನೆಯಲ್ಲ

dcm d.k.shivakumar
ಡಿಸಿಎಂ ಡಿ.ಕೆ.ಶಿವಕುಮಾರ್
Published on

ಕೋಲಾರ/ಮಾಲೂರು: ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸಲು ಎತ್ತಿನಹೊಳೆ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್​ ಸರ್ಕಾರ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿದರು.

ಜಿಲ್ಲೆಯ ಮಾಲೂರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎತ್ತಿಹೊಳೆ ಯೋಜನೆ ಬಿಜೆಪಿ, ಜೆಡಿಎಸ್​ ಕಾರ್ಯಕ್ರಮವಲ್ಲ, ಅದು ಕಾಂಗ್ರೆಸ್​ ಕಾರ್ಯಕ್ರಮ. ಕೆಲವರು ಎತ್ತಿನಹೊಳೆ ಯೋಜನೆಯಿಂದ ನೀರು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆಲ್ಲ ನಾವು ಕಿವಿಗೋಡುವುದಿಲ್ಲ. ಯೋಜನೆಯಿಂದ ಖಂಡಿತವಾಗಿಯೂ ಜಿಲ್ಲೆಗೆ ನೀರು ಹರಿಯುತ್ತದೆ. ಇದಕ್ಕೆ ಬೇಕಾಗಿರುವ ರೂಪುರೇಷೆಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ, ಜೆಡಿಸ್​ನವರಿಗೆ ನಮ್ಮ ವಿರುದ್ಧ ಅಪಪ್ರಚಾರ ಮಾಡುವುದು ಬಿಟ್ಟರೆ ಬೇರೆನೂ ಗೊತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಅವರು ಏನು ಬೇಕಾದರೂ ಹೇಳಿಕೆ ಕೊಡಲಿ, ಜನ ನಂಬುವುದಿಲ್ಲ ಎಂದರು.

30*40 ಅಳತೆ ನಿವೇಶನದಲ್ಲಿ ನೆಯಿಲ್ಲದೆ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ವಿದ್ಯುತ್​ ಸ್ಮಾರ್ಟ್​ ಮೀಟರ್​ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಹಿಂದೆ 3 ರಿಂದ 4 ಲಕ್ಷದಷ್ಟು ಮಂದಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಮೀಟರ್​ ಪಡೆದುಕೊಂಡಿರಲಿಲ್ಲ. ನಿಯಮ ಸಡಿಲಿಸಿ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಮುಂದಿನ ತಿಂಗಳು ಸಿಎಂ ಬದಲಾವಣೆಯಾದರೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net