ಹಿಜಬ್ ಧರಿಸದೇ ಫೋಟೋಶೂಟ್ ಮಾಡಿದ್ದಕ್ಕೆ 20ರ ಚೆಲುವೆಯನ್ನು ಅಪಹರಿಸಿದ ಉಗ್ರರು

houthi
Published on

ಸನ್ನಾ (ಯಮೆನ್): ಹಿಜಬ್ ಧರಿಸದೇ ಫೋಟೋಶೂಟ್ ಮಾಡಿದ್ದಕ್ಕಾಗಿ ಯಮೆನ್ ದೇಶದ ಮಾಡೆಲ್ ಒಬ್ಬಳನ್ನು ಹೌತಿ ಉಗ್ರರು ಅಪಹರಿಸಿದ್ದಾರೆ.

ಎಂತೆಸಾರ್ ಅಲ್ ಹಮ್ಮಾಡಿ ಎಂಬ 20 ರ ಚೆಲುವೆಯೇ ಅಪಹರಣಕ್ಕೆ ಒಳಗಾದ ಮಾಡೆಲ್. ಇತ್ತೀಚೆಗೆ ಯಮೆನ್ ದೇಶದ ರಾಜಧಾನಿ ಸನ್ನಾ ಎಂಬಲ್ಲಿ ತನ್ನ ಸ್ನೇಹಿತೆಯರ ಜೊತೆ ಚಿತ್ರೀಕರಣಕ್ಕಾಗಿ ತೆರಳುತ್ತಿದ್ದ ವೇಳೆ ಕಾರ್​ ಅಡ್ಡಗಟ್ಟಿದ ಉಗ್ರರು ಎಂತೆಸಾರ್​ಳನ್ನು ಎಳೆದೋಯ್ದಿದ್ದಾರೆ.

ಇಸ್ಲಾಂ ನಿಯಮಗಳನ್ನು ಉಲ್ಲಂಘಿಸಿದ್ದಾಳೆ ಎಂದು ಎಂತೆಸಾರ್​ ಮೇಲೆ ಉಗ್ರರು ಆರೋಪಿಸಿದ್ದು, ಅವಳನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಯಮೆನ್ ರಕ್ಷಣಾ ಸಚಿವ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ಎಂತೆಸಾರ್​ ಯಮೆನ್​ನಲ್ಲಿ ಇತ್ತೀಚೆಗೆ ತಮ್ಮ ನೇರ ನಡೆ ನುಡಿಗಳಿಂದ ಸಾಕಷ್ಟು ಸದ್ದು ಮಾಡುತ್ತಿದ್ದಾಳೆ. ಇದು ಉಗ್ರರ ಕೆಂಗಣ್ಣಿಗೆ ಕಾರಣವಾಗಿದೆ. ಯಮೆನ್​ನಲ್ಲಿ ಇಸ್ಲಾಂ ಸರ್ಕಾರವನ್ನು ಸ್ಥಾಪಿಸಲು ಹೌತಿ ಉಗ್ರರು ಪ್ರಯತ್ನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net