ಹಿಮಾಲಯದಲ್ಲಿ ಜೋಗಪ್ಪನ ಅರಮನೆ! ಅಪರೂಪದ ಸ್ಥಳಗಳಲ್ಲಿ ಹಯವದನ ಮತ್ತು ತಂಡ ಚಿತ್ರೀಕರಣ

yello jogappa ninnaramane
Published on

ಬೆಂಗಳೂರು: ‘ಅಗ್ನಿಸಾಕ್ಷಿ’, ‘ಶುಭಮಂಗಳ’, ‘ನಾಗಿಣಿ’, ‘ಕಮಲಿ’ ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಹಯವದನ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’.

ಚಿತ್ರಕ್ಕೆ ‘ಕಂಬ್ಳಿಹುಳ’ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿದ್ದು, ಅವರಿಗೆ ವೆನ್ಯ ರೈ ನಾಯಕಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನೊಂದು ಹಾಡಿನ ಶೂಟಿಂಗ್ ಮಾತ್ರ ಬಾಕಿಯಿದೆ. ನಿರ್ದೇಶಕ ಹಯವದನ ಮಹಾರಾಷ್ಟ್ರ, ಉತ್ತರಾಖಂಡ, ದೆಹಲಿ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಹಾಗೂ ಹಿಮಾಲಯದ ಕೊರೆಯುವ ಚಳಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ಯಾರೂ ಸಲೀಸಾಗಿ ಚಿತ್ರೀಕರಣ ಮಾಡಲಾಗದ ಜಾಗಗಳನ್ನು ಗುರುತಿಸಿ ಅಲ್ಲಿ ಶೂಟಿಂಗ್ ನಡೆಸಿರುವುದು ಚಿತ್ರತಂಡದ ಹೆಗ್ಗಳಿಕೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ಚಿತ್ರತಂಡ ಬಿಜಿಯಾಗಿದೆ.

‘ಎಲ್ಲೋ ಜೋಗಪ್ಪ ನಿನ್ನರಮನೆ’ ಒಂದು ಜರ್ನಿಯ ಕಥೆ, ಜತೆಗೆ ತಂದೆ - ಮಗನ ಭಾವನಾತ್ಮಕ ಸಂಬಂಧ ಈ ಚಿತ್ರದ ಹೈಲೈಟ್. ತಂದೆಯ ಮಾತಿಗೆ ಮುನಿಸಿಕೊಂಡು ಮನೆ ಬಿಡುವ ಹುಡುಗನ ಕಥೆ ಚಿತ್ರದಲ್ಲಿದೆ. ಲವ್, ಸೆಂಟಿಮೆಂಟ್, ಕಾಮಿಡಿ ಅಂಶಗಳನ್ನು ಒಳಗೊಂಡಿರುವ ಸಿನಿಮಾ. ಅಂಜನ್ ನಾಗೇಂದ್ರ, ವೆನ್ಯ ರೈ ಜತೆ ಸಂಜನಾ ದಾಸ್, ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು, ಬಿರಾದಾರ್ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಶಿವಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣ ಹಾಗೂ ರವಿಚಂದ್ರನ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net