ಬಿಜೆಪಿಯ ಯಾವ ಅತೃಪ್ತ ಶಾಸಕರೂ ನನ್ನೊಂದಿಗೆ ಸಂಪರ್ಕದಲ್ಲಿ ಇಲ್ಲ ಎಂದ ಎಚ್​ಡಿಕೆ

kumaraswamy
Published on

ರಾಮನಗರ: ಬಿಜೆಪಿ ಸರ್ಕಾರ ಪತನಕ್ಕೆ ನಾನು ಮುಂದಾಗುವುದಿಲ್ಲ. ನನ್ನೊಂದಿಗೆ ಬಿಜೆಪಿಯ ಯಾವುದೇ ಅತೃಪ್ತ ಶಾಸಕರ ಸಂಪರ್ಕ ಇಲ್ಲ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ನಾನು ಬಿಜೆಪಿ ಸರ್ಕಾರವನ್ನು ವಿಚಲಿತಗೊಳಿಸುವುದಿಲ್ಲ. ಸರ್ಕಾರ ಪತನದ ಬಗ್ಗೆ ಬಿಜೆಪಿ ಶಾಸಕರು ಚರ್ಚೆ ನಡೆಸಿಲ್ಲ. ಜನರ ಕಷ್ಟ ನಿವಾರಣೆ ಮಾಡುವುದು ನನ್ನ ಗುರಿ ಸರ್ಕಾರ ಪತನದ ಕಡೆ ಗಮನ ಹರಿಸುವುದಿಲ್ಲ ಎಂದು ಅವರು ಹೇಳಿದರು.

ಚನ್ನಪಟ್ಟಣದ ಮಾಜಿ ಶಾಸಕರಿಗೆ ಮಂತ್ರಿಗಿರಿ ಸಿಕ್ಕಿಲ್ಲದ ಹಿನ್ನೆಲೆಯಲ್ಲಿ ಅವರು ಸರ್ಕಾರ ಪತನಕ್ಕೆ ಮುಂದಾಗಿದ್ದಾರೆ ಎನ್ನುವ ಹೊಸ ವಿಚಾರ ನನ್ನ ಗಮನಕ್ಕೆ ಬಂದಿದೆ. ಬಿಜೆಪಿಯವರಲ್ಲೇ ಅತೃಪ್ತಿ ಇದ್ದರೆ ನಾನು ಏನು ಮಾಡಲಿ ಎಂದರು.

ಬಜೆಟ್​ ಬಗ್ಗೆ ಸಂಪುಟ ಸಹೋದ್ಯೋಗಿಗಳೇ ಉತ್ತರ ನೀಡುತ್ತಾರೆ. ಸಿಎಂ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್​ ಬಗ್ಗೆ ನಾನು ಉತ್ತರಿಸುವುದಿಲ್ಲ. ಅವರ ಸಂಪುಟದಲ್ಲಿರುವ ಮಂತ್ರಿಗಳನ್ನು ಕೇಳಿದರೆ ಉತ್ತರ ನೀಡುತ್ತಾರೆ ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net