ಕಾಫಿನಾಡಲ್ಲಿ ವರ್ಷದ ಮೊದಲ ಭರ್ಜರಿ ಮಳೆ! 1 ಗಂಟೆಗೆ ಒಂದೂವರೆ ಇಂಚಿನಷ್ಟು ವರುಣ

WhatsApp Image 2024-03-14 at 4.11.08 PM
Published on

ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಬಿಸಿಲಿನ ಕಾವು ಹೆಚ್ಚಾಗುತ್ತಿದ್ದು, ರಣಬಿಸಿಲ ಬೇಗೆಗೆ ಬೆವರಿ ಬಳಲುತ್ತಿರುವ ಜನರು ಇದೀಗ ವರ್ಷದ ಮೊದಲ ಮಳೆ ನೋಡಿದಾಗ ಉಂಟಾಗುವ ಖುಷಿ ಅಷ್ಟಿಷ್ಟಲ್ಲ ಅನೋದಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿದ ವರ್ಷದ ಮೊದಲ ಭರ್ಜರಿ ಮಳೆಯೇ ಸಾಕ್ಷಿ.

ಕಾದ ಕಾವಲಿಯಂತಾಗಿದ್ದ ಭೂಮಿಗೆ ತಂಪೆರೆದ ವರುಣ. ಒಂದೇ ಗಂಟೆಗೆ ಒಂದೂವರೆ ಇಂಚಿನಷ್ಟು ಮಳೆಯಾಗಿದ್ದು, ಮಳೆ ಕಂಡ ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಹಳ್ಳಿಗರು, ಬೆಳೆಗಾರರು, ಗ್ರಾಮದಲ್ಲಿ ಭಾರೀ ಮಳೆಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಮುತ್ತೋಡಿ ತಪ್ಪಲಿನ ಜಾಗರ ಹೋಬಳಿಯ ಕೊಳಗಾಮೆ ಮೇಲಿನಹುಲುವತ್ತಿ ಭಾಗದಲ್ಲಿ ಭರ್ಜರಿ ಮಳೆ ದಾಖಲಿಸಿದೆ.

ಹಲವು ಹಳ್ಳಿಗಳಲ್ಲಿ 20-30-40 ಸೆ‌.ನಷ್ಟು ಮಳೆಯಾಗಿದ್ದು, ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರು, ಕಾಫಿ ಬೆಳೆಗಾರರಿಗೆ ಭಗವಂತ ವರ ಕೊಟ್ಟಂತಾಯಿತು. ಅಡಿಕೆ, ಕಾಫಿ, ಮೆಣಸು ಉಳಿಕೊಳ್ಳಲು ಪರದಾಡ್ತಿದ್ದ ಮಲೆನಾಡಿಗರಿಗೆ ಇದೀಗ ಭರ್ಜರಿ ಮಳೆಯಿಂದ ಮನ ತಂಪಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net