ಮಗನ ಬರ್ತ್‌ಡೇಗೆ 'ಟಗರು' ಹಾಡಿಗೆ ಮಸ್ತ್ ಸ್ಟೆಪ್ಸ್‌ ಹಾಕಿದ ರಾಕಿಭಾಯ್ ! Yash Dance Video

yash
Published on

 ಬೆಂಗಳೂರು:  ( Yash Dance Video ) ಸ್ಯಾಂಡಲ್​ವುಡ್​ ನಟ ಯಶ್​ ಮಗನ ಬರ್ತ್‌ಡೇ ಸೆಲೆಬ್ರೇಶನ್‌  ದಿನ ಭರ್ಜರಿಯಾಗಿ ಆಗಿ ಯಶ್ ಡ್ಯಾನ್ಸ್ ಮಾಡಿದ್ದಾರೆ. ಶಿವಣ್ಣನ ಟಗರು ಸಿನಿಮಾದ ಟೈಟಲ್ ಟ್ರ್ಯಾಕ್‌ಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ವೀಡಿಯೋ ಹೊರಬಿದ್ದ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಟ್ಟಿದೆ.

ಪುತ್ರ ಯಥರ್ವ್ 5ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಈ ವೀಡಿಯೋ ಹೊರಬಿದ್ದ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,  ಯಶ್ ಡ್ಯಾನ್ಸ್ ನೋಡಿ ಯಾವ ಕಾಲ ಆಗಿತ್ತು ಮಗ ಅಂತ ಅವರ ಫ್ಯಾನ್ಸ್ ಎಲ್ಲ ತಮ್ಮ ನೆಚ್ಚಿನ ನಟನ ಡ್ಯಾನ್ಸ್ ಅನ್ನು ಕಣ್ತುಂಬಿಕೊಂಡಿದ್ದಾರೆ.

ಟಗರು ಬಂತು ಟಗರು’ ಹಾಡಿಗೆ ಸ್ಟೆಪ್ ಯಶ್ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ರಾಧಿಕಾ (Radhika Pandit) ಕೂಡ ಮಗನನ್ನು ಎತ್ತಿಕೊಂಡು ಯಶ್ ಡ್ಯಾನ್ಸ್‌ಗೆ ಸಾಥ್ ಕೊಟ್ಟಿದ್ದಾರೆ.  ಯಥರ್ವವನನ್ನು ರಾಧಿಕಾ ಪಂಡಿತ್ ಎತ್ತಿಕೊಂಡು ಯಶ್ ಜೊತೆ ಸ್ಟೆಪ್ಸ್ ಹಾಕಲು ಪ್ರಯತ್ನಿಸಿದ್ದಾರೆ. ಇನ್ನೊಂದು ಕಡೆ ಪುಟಾಣಿ ಮಗಳು ಆಯ್ರಾ ಕೂಡ ಅಪ್ಪನ ಡ್ಯಾನ್ಸ್‌ಗೆ ಸ್ಟೆಪ್ಸ್ ಹಾಕೋ ಜೊತೆಗೆ ಅವರ ಡ್ಯಾನ್ಸ್ ಅನ್ನು ಬೆರಗಾಗಿ ನೋಡಿದ್ದಾಳೆ.

ರಾಕಿಂಗ್ ಸ್ಟಾರ್ ಯಶ್ ಸದ್ಯ 'ಟಾಕ್ಸಿಕ್' ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಅದರ ನಡುವೆ ಮಗನ ಬರ್ತ್‌ಡೇಗೆ ಬಿಡುವು ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net