ಯಾಮಿ ಗೌತಮ್ ಹೊಸ ಕಹಾನಿ: ವಿದ್ಯಾ ಬಾಲನ್ ಜಾಗಕ್ಕೆ ಬಂದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಯಾಮಿ ಗೌತಮ್​
ಯಾಮಿ ಗೌತಮ್​
Published on

ಪ್ರಮುಖ ಮುಖ್ಯಾಂಶಗಳು

  • ಆರ್ಟಿಕಲ್ 370 ಚಿತ್ರದ ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದ ಖುಷಿಯಲ್ಲಿದ್ದ ಯಾಮಿ
  • ಕಹಾನಿ 3 ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ
  • ಹಿಂದಿನ ಭಾಗದ ಮುಂದುವರಿದ ಕಥೆಯಲ್ಲದೆ, ಹೊಸ ಕಥೆ ಹೇಳಲಿರುವ ಸುಜೋಯ್​
ಹಿಂದಿಯ ‘ಆರ್ಟಿಕಲ್ 370’ ಚಿತ್ರದ ಅಭಿನಯಕ್ಕೆ ನಟಿ ಯಾಮಿ ಗೌತಮ್ ರಾಷ್ಟ್ರಪ್ರಶಸ್ತಿ ಪಡೆದ ಸಂತಸದಲ್ಲಿದ್ದಾರೆ. ಮುಂದಿನ ತಿಂಗಳು ಪ್ರಶಸ್ತಿ ಪ್ರದಾನವಾಗಲಿದೆ. ಅದಕ್ಕೂ ಮುನ್ನ ಯಾಮಿ ಹೊಸ ಕಹಾನಿ ಆರಂಭಿಸಿದ್ದಾರೆ. ಹಿಂದಿಯ ‘ಹಕ್’ ಬಳಿಕ ನಟಿಯ ಯಾವುದೇ ಸಿನಿಮಾದ ಮಾಹಿತಿ ಇರಲಿಲ್ಲ. ಇದೀಗ ಅವರು ‘ಕಹಾನಿ 3’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ. ಥ್ರಿಲ್ಲರ್ ಜಾನರ್‌ನ ‘ಕಹಾನಿ’ (2012), ‘ಕಹಾನಿ 2: ದುರ್ಗಾ ರಾಣಿ ಸಿಂಗ್’ ಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾಗಿದ್ದ ಬಾಲಿವುಡ್ ನಿರ್ದೇಶಕ ಸುಜೋಯ್ ೋಷ್ ಇದೀಗ ‘ಕಹಾನಿ’ಯ ಮೂರನೇ ಭಾಗವನ್ನು ತೆರೆ ಮೇಲೆ ತರಲು ಮುಂದಾಗುತ್ತಿದ್ದಾರೆ. ಈ ಹೊಸ ಸಿನಿಮಾವು ಹೊಸ ಕಥೆಯಾಗಿದ್ದು, ಈ ಹಿಂದಿನ ಎರಡು ಸಿನಿಮಾಗಳ ಮುಂದುವರಿದ ಭಾಗವಲ್ಲ ಎಂದು ತಿಳಿದುಬಂದಿದೆ. ಹೀಗಾಗಿ, ‘ಕಹಾನಿ’ ಸರಣಿಯಲ್ಲಿ ನಟಿಸಿದ್ದ ವಿದ್ಯಾ ಬಾಲನ್ ಬದಲಿಗೆ ಬೇರೊಬ್ಬ ನಟಿ ಇದ್ದರೆ ಒಳ್ಳೆಯದು ಎಂಬ ತೀರ್ಮಾನಕ್ಕೆ ತಂಡ ಬಂದಿದೆ. ಈ ಹಿನ್ನೆಲೆಯಲ್ಲಿ ಯಾಮಿ ಗೌತಮ್ ಆಯ್ಕೆಯಾಗಿದ್ದು, ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಖಚಿತವಾಗಿದ್ದು, ಸದ್ಯದಲ್ಲೇ ೋಷಣೆಯಾಗಲಿದೆ. ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿದ್ದು, ಇದು ಮುಗಿದ ತಕ್ಷಣವೇ ತಂಡ ಶೂಟಿಂಗ್‌ಗೆ ತೆರಳಲಿದೆ. ಇನ್ನು ಸುಜೋಯ್ ‘ಲಸ್ಟ್ ಸ್ಟೋರಿಸ್’ (2023) ತೆರೆಕಂಡು ಮೂರು ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net