ಈ ಹಿಂದೆ ನನ್ನನ್ನು ಕಡಿಮೆ ಅಂದಾಜು ಮಾಡಲಾಗಿತ್ತು...ರಾಷ್ಟ್ರೀಯವಾದಿ ಹಣೆಪಟ್ಟಿ ಕಟ್ಟಿದ್ದಕ್ಕೆ ಯಾಮಿ ಗೌತಮ್ ಪ್ರತಿಕ್ರಿಯೆ Yami Gautam

yamigautam
Published on

ಮುಂಬೈ: ಬಾಲಿವುಡ್​ ನಟಿ ಯಾಮಿ ಗೌತಮ್​ (Yami Gautam) ಇತ್ತೀಚೆಗೆ ಆಯ್ಕೆ ಮಾಡಿಕೊಂಡ ಸಿನಿಮಾಗಳಿಗೆ ರಾಷ್ಟ್ರೀಯವಾದಿ ಎಂಬ ಹಣೆಪಟ್ಟು ಕಟ್ಟಿದ್ದಕ್ಕೆ ಪ್ರತಿಕ್ರಿಯಿಸಿದ್ದು, ಜನರು ನನ್ನನ್ನು ಈ ರೀತಿ ಟ್ಯಾಗ್​ ಮಾಡಿದ್ದಾರೆಂದು ನನಗೆ ತಿಳಿದಿರಲಿಲ್ಲ. ಇಂತಹ ಹಣೆಪಟ್ಟಿಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬದಲಿಗೆ ಕೆಲಸದ ಮೇಲೆ ಕೇಂದ್ರೀಕರಿಸಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.

ಮೌನ ಮುರಿದ ನಟಿ ಯಾಮಿ

ನಟಿಯ ಮುಂಬರುವ ಚಿತ್ರ ಹಕ್‌ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಇವರು, ತಾವು ಇತ್ತೀಚೆಗೆ ಆಯ್ಕೆ ಮಾಡಿಕೊಂಡಿರುವ ಚಿತ್ರಗಳಾದ ಲಾಸ್ಟ್, ಆರ್ಟಿಕಲ್ 370, ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಹಾಗೂ ಎ ಥರ್ಸ್‌ಡೇ ಸಿನಿಮಾಗಳಲ್ಲಿ ನಟಿಸಿದ್ದಕ್ಕಾಗಿ "ರಾಷ್ಟ್ರೀಯವಾದಿ ನಟಿ" ಎಂದು ಟ್ಯಾಗ್​ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಟ್ಯಾಗ್​ಗೆ ಪ್ರತಿಕ್ರಿಯಿಸಿದ ಹಕ್‌ ನಟ, ಸಿನಿಮಾ ತಾರೆಯರಿಗೆ ಜನರು ಮೊದಲು ಒಂದು ಲೇಬಲ್​ನ್ನು ಕೊಡುತ್ತಾರೆ ಅದು ಏನು ಎಂಬುದು ನನಗೆ ತಿಳಿದಿಲ್ಲ. ಅದು ಇದ್ದರೆ ಜನರು ಯಾವಾಗಲೂ ಏನನ್ನಾದರೂ ಹೇಳುತ್ತಿರುತ್ತಾರೆ. ಆ ಲೇಬಲ್​ ಇಲ್ಲದಿದ್ದರೆ, ನಂತರ ಬೇರೇನೋ ಹೇಳುತ್ತಾರೆ. ಈ ಮೊದಲು ನನ್ನನ್ನು "ಅಂಡರೇಟರ್"​ ಎಂದು ಕರೆಯಲಾಗುತ್ತಿತ್ತು. ಅದಕ್ಕೂ ಮುನ್ನ ಬೇರೆ ರೀತಿಯಾಗಿ ಕರೆಯಲಾಗುತ್ತಿತ್ತು ಅದು ನಿಜವಾಗಿಯೂ ಅರ್ಥವಾಗುತ್ತಿರಲಿಲ್ಲ ಎಂದು ಹೇಳಿದರು.

ಯಾಮಿ ಅವರು ಆಯ್ದುಕೊಳ್ಳುವ ಕಥೆಗಳು ಅವರ ಕೆಲಸದ ಕೇಂದ್ರವಾಗಿವೆ. ಅವರು ತನ್ನ ಪ್ರೇಕ್ಷಕರಿಗೆ ಹೇಳುವ ಕಥೆಗಳನ್ನು ನಂಬುವವರೆಗೂ ಯಾವುದೇ ಲೇಬಲ್‌ಗೆ ಹೆದರುವುದಿಲ್ಲ ಎಂದು ತಿಳಿಸಿದರು.

ನನಗೆ ಸಿಗುತ್ತಿರುವ ಅವಕಾಶಗಳು, ನನಗೆ ಹೇಳಲು ಸಿಗುವ ಕಥೆಗಳು ಮತ್ತು ತಮ್ಮದೇ ಆದ ಗುರುತು ಹಾಗೂ ಪ್ರಮುಖ್ಯತೆಗಳು ಮನರಂಜನಾ ಮಾಧ್ಯಮದ ಮೂಲಕ ಹೇಳಬೇಕಾದ ಅಗತ್ಯವನ್ನು ಹೊಂದಿವೆ ಎಂದು ನಾನು ನಂಬುತ್ತೇನೆ. ಹಾಗೆಯೇ ತನ್ನ ಪ್ರೇಕ್ಷಕರು ನೀಡಿದ ಲೇಬಲ್‌ಗಳನ್ನು ನಾನು ಗೌರವಿಸುತ್ತೇನೆ ಎಂದು ಯಾಮಿ ಹಂಚಿಕೊಂಡಿದ್ದಾರೆ.

ಯಾಮಿ ಮುಂದಿನ ಯೋಜನೆ

ಯಾಮಿ ಅವರ ಅಭಿಮಾನಿಗಳು ಕೊನೆಯ ಬಾರಿಗೆ ಹಾಸ್ಯಮಯ ಚಿತ್ರವಾದ ಧೂಮ್​ ಧಾಮ್​ನಲ್ಲಿ ಪ್ರತೀಕ್​ ಗಾಂಧಿ ಜೊತೆಗೆ ನಟಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನೆಟ್​ಫ್ಲಿಕ್ಸ್​ನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಇನ್ನು ಅವರ ಮುಂದಿನ ಹಕ್​ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದು 1985 ರ ಶಾ ಬಾನೋ V/S ಅಹ್ಮದ್ ಖಾನ್ ಪ್ರಕರಣದಿಂದ ಪ್ರೇರಿತವಾಗಿದೆ. ಈ ಚಿತ್ರದಲ್ಲಿ ವರ್ತಿಕಾ ಸಿಂಗ್, ಡ್ಯಾನಿಸ್​ ಹುಸೇನ್​ ಮತ್ತು ಶೀಬಾ ಚಡ್ಡಾ ನಟಿಸಿದ್ದಾರೆ. ಇದು ನವೆಂಬರ್ 7 ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net