ಬೆಂಗಳೂರು:
ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಬೆಂಗಳೂರಿನ ಪ್ರಮುಖ ಸ್ಥಳಗಳಾದ ಬೊಮ್ಮನಹಳ್ಳಿ ಮತ್ತು ಮಾರತಹಳ್ಳಿಯಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್ ಶಿಪ್ ಶೋರೂಂಗಳನ್ನು ತೆರೆದಿದೆ. ಈ ಮೂಲಕ ಯಮಹಾ ಸಂಸ್ಥೆಯು ರಾಜ್ಯದಲ್ಲಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.
ಬೊಮ್ಮನಹಳ್ಳಿ ಮೋಟೋ ವರ್ಲ್ಡ ಎಂಬ ಹೆಸರಿನಲ್ಲಿ ಮತ್ತು ಮಾರತಹಳ್ಳಿಯಲ್ಲಿ ಪನಾಚೆ ಎಂಟರ್ ಪ್ರೈಸಸ್ ಹೆಸರಿನಲ್ಲಿ ಆರಂಭವಾಗಿರುವ ನೂತನ ಬ್ಲೂಸ್ಕ್ವೇರ್ ಶೋರೂಮ್ ಗಳು ಗ್ರಾಹಕರಿಗೆ ಅತ್ಯುತ್ತಮ ಮಾರಾಟ ಮತ್ತು ಸರ್ವೀಸ್ ಸೌಲಭ್ಯ ಒದಗಿಸಲು ವಿನ್ಯಾಸಗೊಂಡಿವೆ. ಹೊಸತಾಗಿ ಮತ್ತೆರಡು ಶೋರೂಂಗಳನ್ನು ತೆರೆಯುವ ಮೂಲಕ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ.
ದ್ವಿಚಕ್ರ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಮತ್ತು ಮೋಟಾರ್ ಸೈಕ್ಲಿಂಗ್ ಆಸಕ್ತರ ಸಮುದಾಯ ಬೆಳೆಯುತ್ತಿರುವುದರಿಂದ ರಾಜ್ಯವು ಯಮಹಾ ದ ಪ್ರಮುಖ ಮಾರುಕಟ್ಟೆಯಾಗಿ ಬೆಳೆದಿದೆ. ಅದಕ್ಕೆ ಪೂರಕವಾಗಿ ಯಮಹಾ ಸಂಸ್ಥೆಯು ಉತ್ತಮ ಡೀಲರ್ ನೆಟ್ ವರ್ಕ ಸಿದ್ಧಗೊಳಿಸಿದ್ದು, ಗ್ರಾಹಕರ ಆದ್ಯತೆಗೆ ತಕ್ಕಂತೆ ನವೀನ ಉತ್ಪನ್ನಗಳನ್ನು ಒದಗಿಸುತ್ತದೆ. ಬೆಂಗಳೂರಿನಲ್ಲಿ ಆರಂಭವಾಗಿರುವ ಈ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್ ಶಿಪ್ ಶೋರೂಂಗಳ ಸೇರ್ಪಡೆಯಿಂದ ಕರ್ನಾಟಕದಲ್ಲಿರುವ ಈ ಶೋರೂಂಗಳ ಒಟ್ಟು ಸಂಖ್ಯೆ 33ಕ್ಕೆ ಏರಿದೆ. ಬೆಂಗಳೂರಿನಲ್ಲಿಯೇ ಒಟ್ಟು 19 ಶೋರೂಂಗಳಿವೆ.
ಬ್ಲೂ ಸ್ಕ್ವೇರ್ ಶಿಪ್ ಶೋರೂಂಗಳು ಕೇವಲ ರಿಟೇಲ್ ಮಾರಾಟದ ಸ್ಥಳಗಳಷ್ಟೇ ಆಗಿ ಉಳಿದಿಲ್ಲ. ಈ ಶೋರೂಮ್ ಗಳನ್ನು ಉನ್ನತ ಮಟ್ಟದ ಮೋಟಾರ್ ಸೈಕ್ಲಿಂಗ್ ಅನುಭವ ಒದಗಿಸುವ ಕೇಂದ್ರಗಳಾಗಿ ವಿನ್ಯಾಸಗೊಳಿಸಲಾಗಿದೆ. ಈ ಶೋರೂಮ್ ನ ಹೆಸರಿನಲ್ಲಿನ ’ಬ್ಲೂ’ ಯಮಹಾದ ರೇಸಿಂಗ್ ಪರಂಪರೆಯ ಸಂಕೇತವಾಗಿದೆ.
ಶೋರೂಮ್ ಗಳು ಯಮಹಾ ಮೋಟಾರ್ ಸೈಕಲ್ ಗಳು ಮತ್ತು ಸ್ಕೂಟರ್ ಗಳನ್ನು ಸೊಗಸಾಗಿ ಪ್ರದರ್ಶಿಸುತ್ತವೆ. ಜೊತೆಗೆ ಇಲ್ಲಿ ವ್ಯಾಪಕ ಶ್ರೇಣಿಯ ಯಮಹಾ ಒರಿಜಿನಲ್ ಪರಿಕರಗಳು, ಉಡುಪುಗಳು ಮತ್ತು ಬಿಡಿಭಾಗಗಳು ದೊರೆಯುತ್ತವೆ. ಗ್ರಾಹಕರು ಸಹ ಉತ್ಸಾಹಿ ರೈಡರ್ ಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮ ಯಮಹಾ ಮೋಟಾರ್ ಸೈಕಲ್ ಗಳ ಜೊತೆಗೆ ಅತ್ಯಾಕರ್ಷಕ ರೈಡ್‌ಗಳು ಹಾಗೂ ಸಮುದಾಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತವೆ. ಈ ವಿಸ್ತರಣಾ ಪ್ರಕ್ರಿಯೆಯು ಸದ್ಯ ಚಾಲ್ತಿಯಲ್ಲಿರುವ ಯಮಹಾದ ’ದಿ ಕಾಲ್ ಆಫ್ ದಿ ಬ್ಲೂ’ ಪ್ರಚಾರ ಅಭಿಯಾನಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತಿದ್ದು, ಭಾರತದಲ್ಲಿ ಯಮಹಾ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.