ರಸ್ತೆ ಬದಿ ನಿಂತಿದ್ದ ಲಾರಿಗೆ ಟಂಟಂ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು

Death
Published on

ಯಾದಗಿರಿ: ರಸ್ತೆ ಬದಿ ನಿಂತಿದ್ದ ಕಬ್ಬಿನ ಲಾರಿಗೆ ಟಂಟಂ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಡಗೇರಾ ತಾಲೂಕಿನ ಗಡ್ಡೆಸೂಗುರು ಬಳಿ ಸಂಭವಿಸಿದೆ.

ಹಾಲಗೇರಾ ಗ್ರಾಮದ ಬಾಷಪ್ಪ ದುಪ್ಪಲ್ಲಿ (46) ಚಿತ್ತಾಪುರ ತಾಲೂಕಿನ ಸಿದ್ದಮ್ಮ (40) ಹಾಗೂ ರಮೇಶ (26) ಮೃತರು.
ಬಾಷಪ್ಪನ ಪತ್ನಿ ರಾಯಮ್ಮ (38) ಮಕ್ಕಳಾದ ರೇಣುಕಾ (12) ಹಾಗೂ ನಿಂಗರಾಜು (9) ಎಂಬವವರ ಸ್ಥಿತಿ ಗಂಭೀರವಾಗಿದ್ದು ರಾಯಚೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ರಕ್ತಹೀನತೆ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲಗೇರಾದ ಮೃತ ಬಾಷಪ್ಪ ಪ್ರತಿ ತಿಂಗಳು ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಬೆಂಗಳೂರಿನಿಂದ ಚಿಕಿತ್ಸೆ ಕೊಡಿಸಿಕೊಂಡು ಕುಟುಂಬ ಸಮೇತ ಯಾದಗಿರಿಗೆ ಬಂದಿದ್ದರು. ಯಾದಗಿರಿಯಿಂದ ಗ್ರಾಮಕ್ಕೆ ತೆರಳಲು ಅವರು ಟಂಟಂನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net