ಮಾರಕ ವೈರಸ್​ ಕೊರೊನಾದ ಬಗ್ಗೆ 40 ವರ್ಷದ ಹಿಂದೆಯೇ ಉಲ್ಲೇಖ: ವುಹಾನ್​ 400 ಎಂಬ ಹೆಸರಿನ ಜೈವಿಕ ಅಸ್ತ್ರ ತಯಾರಿಸಿದರೇ ಚೀನಿಯರು!

DEAN
Published on

ನವದೆಹಲಿ: ಮಾರಕ ವೈರಸ್​ ಕೊರೊನಾದ ಬಗ್ಗೆ 1981ರಲ್ಲಿ ಪ್ರಕಟವಾದ ಡೀನ್​ ಕೂಂಟ್ಸ್​ ಅವರು ಬರೆದ "ದಿ ಐಯ್ಸ್​ ಆಫ್​ ಡಾರ್ಕ್​ನೆಸ್" ಎಂಬ ಕಾದಂಬರಿಯಲ್ಲಿ ಪ್ರಸ್ತಾಪವಾಗಿತ್ತು.

ಈ ಕಾದಂಬರಿಯಲ್ಲಿ ಬರುವಂತೆ ಚೀನಾದ ಸೇನಾಪಡೆಯ ಸಂಶೋಧನಾ ವಿಭಾಗ ಒಂದು ವೈರಸ್​ನ್ನು ಸೃಷ್ಟಿಸುತ್ತದೆ. ಆ ವೈರಸ್​​ನ್ನು ಒಂದು ಜೈವಿಕ ಅಸ್ತ್ರವನ್ನಾಗಿ ಬಳಸಲಾಗುತ್ತದೆ ಎಂಬ ಅಂಶ ಪ್ರಕಟವಾಗಿತ್ತು. ಈ ವಿಷಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕಾದಂಬರಿಯ ಪುಟ 39ರಲ್ಲಿ, ವುಹಾನ್​ನಲ್ಲಿರುವ ಸೇನಾಪಡೆಯ ಸಂಶೋಧನಾ ಕೇಂದ್ರ ವೈರಸ್​ನ್ನು ಸೃಷ್ಟಿಸುತ್ತದೆ. ಅದಕ್ಕೆ ವುಹಾನ್​ 400 ಎಂದು ಹೆಸರಿಸಲಾಗಿರುತ್ತದೆ ಎಂದು ಬರೆದಿದೆ.

ಇದನ್ನು ಟ್ವೀಟ್​ ಮಾಡಿರುವ ಕಾಂಗ್ರೆಸ್​ ಮುಖಂಡ ಮನೀಷ್​ ತಿವಾರಿ, ಕೊರೊನಾ ವೈರಸ್​ ಎಂಬ ಜೈವಿಕ ಶಸ್ತ್ರಾಸ್ತ್ರವನ್ನು ವುಹಾನ್​ 400 ಎಂಬ ಹೆಸರಿನಲ್ಲಿ ಚೀನಾ ತಯಾರಿಸಿದೆಯೇ? ಈ ಪುಸ್ತಕ ಪ್ರಕಟಗೊಂಡಿರುವುದು 1981ರಲ್ಲಿ! ಎಂದು ಬರೆದಿದ್ದಾರೆ.

ಅಲ್ಲದೆ ಟ್ವೀಟ್​ನಲ್ಲಿ ಆ ಪುಟದ ಒಂದು ಪ್ಯಾರಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೂರಾರು ಟ್ವೀಟಿಗರು ಬಗೆಬಗೆಯಾಗಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net