ಯೋಜನೆ ವಿರೋಧಿಸಿ ಬರವಣಿಗೆ

sgr govu pooje
ದಿನೇಶ್ ಶಿರವಾಳ ಅವರು ತಮ್ಮ ಮನೆಯ ಗೋವಿನ ಮೇಲೆ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ ಎಂಬ ಘೋಷಣೆ ಬರೆದಿರುವುದು.
Published on

ಸಾಗರ: ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಗೋಪೂಜೆ ಸಂದರ್ಭ ತಮ್ಮ ಮನೆಯ ಜಾನುವಾರುಗಳ ಮೇಲೆ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಹೇಳಿಕೆಗಳನ್ನು ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಮಲೆನಾಡು ಭಾಗದಲ್ಲಿ ಗೋಪೂಜೆಗೆ ಗೋವುಗಳನ್ನು ಸಿಂಗರಿಸಲಾಗುತ್ತದೆ. ಆದರೆ ದಿನೇಶ್ ಅವರು ಗೋವಿನ ಮೇಲೆ ಬಣ್ಣದ ಚಿತ್ತಾರದ ಬದಲು ಶರಾವತಿ ಉಳಿಸಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ ಮತ್ತಿತರ ಘೋಷಣೆಗಳನ್ನು ಬರೆಯುವ ಮೂಲಕ ವಿಶೇಷ ರೀತಿಯಲ್ಲಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಯೋಜನೆ ಕೈಬಿಡುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ 12 ದಿನಗಳ ಕಾಲ ನಿರಂತರ ಪ್ರತಿಭಟನೆ ನಡೆಸಿದ್ದೇವೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಪರಿಸರ ಹೋರಾಟಗಾರರು, ಬೆಂಬಲ ನೀಡಿದ್ದಾರೆ. ಯೋಜನೆ ಕೈಬಿಡುವವರೆಗೂ ಹೋರಾಟ ಒಂದಿಲ್ಲೊಂದು ರೀತಿ ನಡೆಯುತ್ತಲೇ ಇರುತ್ತದೆ. ದೀಪಾವಳಿ ಗೋಪೂಜೆ ಸಂದರ್ಭ ಗೋವುಗಳ ಮೇಲೆ ರಾಸಾಯನಿಕ ಮಿಶ್ರಣವಲ್ಲದ ಬಣ್ಣ ಬಳಸಿ ಯೋಜನೆ ವಿರೋಧಿಸಿ ಬರಹ ಬರೆಯುವ ಮೂಲಕ ಪ್ರತಿರೋಧ ವ್ಯಕ್ತಪಡಿದ್ದೇವೆ. ಪಶ್ಚಿಮ ಘಟ್ಟಕ್ಕೆ ಮಾರಕವಾಗಿರುವ ಈ ಯೋಜನೆ ಕಾರ್ಯಗತವಾಗಲು ಬಿಡುವುದಿಲ್ಲ ಎಂದು ದಿನೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net