

ಶಿವಮೊಗ್ಗ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ಉಪ್ಪಾರ ಜನಾಂಗದವರು ಕಾಲಂ ನಂ.9ರ ಜಾತಿ ಕಾಲಂನಲ್ಲಿ ಉಪ್ಪಾರ ಎಂದೇ ನಮೂದಿಸಬೇಕು. ಉಪಜಾತಿ ಕಾಲಂ 10ರಲ್ಲೂ ಉಪ್ಪಾರ ಎಂದೇ ನಮೂದಿಸುವಂತೆ ಉಪ್ಪಾರ ಸಮಾಜ ಜಿಲ್ಲಾಧ್ಯಕ್ಷ ಎಸ್.ಟಿ.ಹಾಲಪ್ಪ ತಿಳಿಸಿದರು.
ಈಗಾಗಲೇ ಆಯೋಗದಿಂದ ಸಾಮಾಜಿಕ ಸಮೀಕ್ಷೆ ಆರಂಭಗೊಂಡಿದೆ. ಸಮೀಕ್ಷಕರು ತಮ್ಮ ಮನೆಗಳಿಗೆ ಬಂದಾಗ ಕುಟುಂಬಕ್ಕೆ ಅನ್ವಯಿಸುವ ಎಲ್ಲ್ಲ ಕಾಲಂಗಳನ್ನೂ ತುಂಬಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಮಾತನಾಡಿ, ನಮ್ಮ ಸಮಾಜದ ಮಠಾಧೀಶರಾದ ಶ್ರೀ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಂದೇಶದಂತೆ ರಾಜ್ಯಾದ್ಯಂತ ನಮ್ಮ ಸಮಾಜದವರು ಉಪ್ಪಾರ ಎಂದೇ ಬರೆಯಿಸುವಂತೆ ತೀರ್ಮಾನಿಸಲಾಗಿದೆ. ಸಮಾಜದವರು ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗವಹಿಸಿ ನಿಖರ ಮಾಹಿತಿ ಒದಗಿಸಬೇಕು ಎಂದು ಹೇಳಿದರು.
ಉಪ್ಪಾರ ಸಮಾಜದ ಪ್ರಮುಖರಾದ ನಾಗರಾಜ್ ಕಂಕಾರಿ, ಕುಂಸಿ ಮೋಹನ್, ನಂಜುಂಡಿ, ರೇಣುಕೇಶ್, ಬನ್ನಿಕೆರೆ ಚಂದ್ರು, ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿದ್ದರು.