ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸಿ

mlas press meet
ಕೋಲಾರ ಪತ್ರಕರ್ತರ ಭವನದಲ್ಲಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮಾತನಾಡಿದರು. ಸಮೃದ್ಧಿ ಮಂಜುನಾಥ್​, ಎಸ್​.ಬಿ.ಮುನಿವೆಂಕಟಪ್ಪ, ಹೂಹಳ್ಳಿ ಪ್ರಕಾಶ್​ ಇದ್ದರು.
Published on

ಕೋಲಾರ: ರಾಜ್ಯದಲ್ಲಿ ನಡೆಯಲಿರುವ ಜಾತಿ ಗಣತಿ ಸಮೀೆಯಲ್ಲಿ ಛಲವಾದಿ ಸಮುದಾಯದವರು ಉಪ ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸಬೇಕು ಎಂದು ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಛಲವಾದಿ ಒಳ ಮೀಸಲಾತಿ ಜಾತಿ ಮತ್ತು ಜನ ಗಣತಿಯ ಜಾಗೃತಿ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಛಲವಾದಿ, ಆದಿ ಕರ್ನಾಟಕ ಸಮುದಾಯದ ಪ್ರತಿ ಕುಟುಂಬ ಜಾತಿ ಗಣತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಉಪಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸುವುದರ ಮೂಲಕ ನಮ್ಮ ಹಕ್ಕನ್ನು ನಾವು ಪಡೆಯಬೇಕು ಎಂದು ತಿಳಿಸಿದರು.

ಜನಗಣತಿಗೆ ಅಧಿಕಾರಿಗಳು ಬಂದಾಗ ವಿದ್ಯಾವಂತ ಯುವಕರು ಸ್ಥಳದಲ್ಲಿ ಹಾಜರಿದ್ದು ಪ್ರತಿ ಕುಟುಂಬದ ಮಾಹಿತಿಯೊಂದಿಗೆ ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸುವುದು ಕಡ್ಡಾಯ ಆಗ ಮಾತ್ರ ನಮಗೆ ಸಿಗಬೇಕಾದ ಹಕ್ಕುಗಳನ್ನು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಎಸ್​.ಬಿ.ಮುನಿವೆಂಕಟಪ್ಪ, ಪ್ರತಾಪ್​, ಹರೀಶ್​, ರಾಮಾಂಜಿನಮ್ಮ, ರಾಜಪ್ಪ, ಹನುಮಂತು, ವೆಂಕಟರಾಮಣ್ಣ, ಲಕ್ಷಿ$್ಮನಾರಾಯಣ, ಕುಪೇಂದ್ರ, ವೆಂಕಟರಾಜು, ರಮೇಶ್​, ಗೋವಿಂದ ರಾಜು, ಹೂವಳ್ಳಿ ಪ್ರಕಾಶ್​, ವೆಂಕಟೇಶ್​, ರವಿಕುಮಾರ್​, ಅಪ್ಪಿ ಉಪಸ್ಥಿತರಿದ್ದರು.

* ಸರ್ಕಾರ ಸ್ಪಷ್ಟನೆ ನೀಡಲಿ

ಶಾಸಕ ಸಮೃದ್ಧಿ ಮಂಜುನಾಥ್​ ಮಾತನಾಡಿ, ಛಲವಾದಿಗಳಲ್ಲೇ ಒಂದೇ ಆಗಿದ್ದರೂ ಅದರಲ್ಲೂ ಗುಂಪು ವಿಂಗಡಣೆ ಮಾಡುವುದು ಬೇಡ. ಸಮರ್ಪಕ ಜನಸಂಖ್ಯೆ ದಾಖಲಾದಲ್ಲಿ ಮಾತ್ರ ಸಮುದಾಯಕ್ಕೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ನ್ಯಾಯೋಚಿತವಾಗಿ ಪಡೆಯಲು ಸಾಧ್ಯ, ಈ ನಿಟ್ಟಿನಲ್ಲಿ ಜನತೆ ಕ್ರಮವಹಿಸಬೇಕು ಎಂದು ಹೇಳಿದರು.

ರಾಜಕೀಯ ಉದ್ದೇಶಕ್ಕೆ ಎಡಗೈ, ಬಲಗೈ, ಚಿಕ್ಕತಾಳಿ, ದೊಡ್ಡ ತಾಳಿ ಎಂದು ವಿಂಗಡಿಸುವುದು ಸರಿಯಿಲ,್ಲ ಛಲವಾದಿ ಸಮುದಾಯದ ಎಡಗೈ ಬಲಗೈ ಎಂಬುದಕ್ಕೆ ಸರ್ಕಾರ ಸರಿಯಾದ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ಒಂದು ತರಹ ಬರೆಸಿದರೆ ತುಮಕೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಬೇರೆ ತರಹ ಒಳ ಜಾತಿ ವಿವರಗಳನ್ನು ನೀಡುವುದರಿಂದ ಗೊಂದಲ ಏರ್ಪಟ್ಟಿದ್ದು, ಛಲವಾದಿ ಸಮುದಾಯದವರೆಲ್ಲಾ ಹೊಲೆಯ ಎಂದು ನಮೂದಿಸಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net