

ಬೀದರ್: ಬೀದರ್ ಅತಿವೃಷ್ಟಿಪೀಡಿತ ಜಿಲ್ಲೆ ಘೋಷಿಸಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಸೋಮವಾರ ರೈತರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಡಾ.ಅಂಬೇಡ್ಕರ್ ವೃತ್ತ ಹತ್ತಿರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಹೋರಾಟ ಆರಂಭಿಸಿದ ಕೃಷಿಕರು, ಸಾಲ ಮನ್ನಾ ಜತೆಗೆ ಸಾಲ ವಸೂಲಿಗೆ ನೋಟಿಸ್ ನೀಡಬಾರದು. 60 ವರ್ಷ ಪೂರೈಸಿದ ರೈತರು, ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ. ನೀಡಬೇಕು. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಆರಂಭಿಸಬೇಕು ಎಂದು ಒತ್ತಾಯಿಸಿದರು.
ಮೋರ್ಚಾ ಜಿಲ್ಲಾ ಸಂಚಾಲಕರಾದ ನಜೀರ್ ಅಹ್ಮದ್, ಮಾರುತಿ ಬೌದ್ಧೆ, ಪ್ರಮುಖರಾದ ಮಲ್ಲಿಕಾರ್ಜುನ ಸ್ವಾಮಿ, ಬಾಬುರಾವ ಹೊನ್ನಾ, ಕೊಂಡಿಬಾರಾವ ಪಾಂಡ್ರೆ, ಚಂದ್ರಶೇಖರ ಪಾಟೀಲ್, ವಿನಯಕುಮಾರ ಮಾಳಗೆ, ಮಹೇಶ ಗೋರನಾಳಕರ್, ಶೀಲಾ ಸಾಗರ್, ಶಾಂತಮ್ಮ ಮೂಲಗೆ, ಎಂ.ಡಿ. ಶಫಾಯತ್ ಅಲಿ, ಸೂರ್ಯಕಾಂತ ಎಂ., ಸಂತೋಷಕುಮಾರ ಗುದಗೆ, ಕಾಶೀನಾಥ ಭೂರೆ, ನಾಗಶೆಟ್ಟಪ್ಪ ಲಂಜವಾಡೆ ಇತರರಿದ್ದರು.