

ಬೀದರ್: ರಾಷ್ಟ್ರೀಯ ಜಾನಪದ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿಯಾಗಿ ಡಾ.ರಾಜಕುಮಾರ ಹೆಬ್ಬಾಳೆ ಅವರನ್ನು ನೇಮಿಸಲಾಗಿದೆ.
ಪರಿಷನ ದಕ್ಷಿಣ ಭಾರತದ ಕಾರ್ಯದರ್ಶಿಯಾಗಿದ್ದ ಹೆಬ್ಬಾಳೆ ಅವರು ಯಶಸ್ವಿಯಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಇದೀಗ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ನೀಡಿ ಪರಿಷತ್ ಅಧ್ಯಕ್ಷ ನಿರ್ಮಲ ರತನಲಾಲ್ ವೈದ್ಯ ನೇಮಿಸಿದ್ದಾರೆ.
ಕೇಂದ್ರದ ಸಂಸ್ಕೃತಿ ಮತ್ತು ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ದೇಶದ ಏಳು ವಲಯ ಸಾಂಸ್ಕೃತಿಕ ಕೇಂದ್ರ, ಸಾಹಿತ್ಯ ಮತ್ತು ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ವಿವಿಧೆಡೆ ರಾಷ್ಟ್ರೀಯ ಜಾನಪದ ಉತ್ಸವ ಅರ್ಥಪೂರ್ಣವಾಗಿ ಹೆಬ್ಬಾಳೆ ಆಯೋಜಿಸಿದ್ದರಿಂದ ಈ ನೇಮಕಾತಿ ಮಾಡಲಾಗಿದೆ.