

Recipe: ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡಾ ಸಿಹಿ ತಿಂಡಿಗಳನ್ನು ಇಷ್ಟಪಡುತ್ತಾರೆ. ಆಹಾರ ಪ್ರಿಯರಿಗೆ ಹಲವಾರು ಖಾದ್ಯದ ಮೇಲೆ ಆಸೆ ಇರುತ್ತದೆ ಆದರೆ ಹೋಗಿ ತರಲು ಸಮಯ ಇರುವುದಿಲ್ಲ. ಇನ್ನು ಕೆಲವರು ಆರೋಗ್ಯಯುತ ಖಾದ್ಯಗಳನ್ನು ತಿನ್ನಲು ಬಯಸುತ್ತಾರೆ. ಅಂತವರಿಗಾಗಿ ಈ ಕುಂಬಳಕಾಯಿ ಬ್ರೆಡ್.. ನಿಮ್ಮ ಮನೆಯಲ್ಲಿಯೇ ಕೇವಲ 1 ಗಂಟೆಯೊಳಗೆ ಈ ರುಚಿಕರ ಕುಂಬಳಕಾಯಿ ಬ್ರೆಡ್ ಖಾದ್ಯವನ್ನು ಮಾಡಿಕೊಂಡು ಸೇವಿಸಬಹುದು.. ಹೇಗಂತೀರಾ ಇಲ್ಲಿದೆ ನೋಡಿ ಕುಂಬಳಕಾಯಿ ಬ್ರೆಡ್ ಈಗಲೇ ಟ್ರೈ ಮಾಡಿ...
* 3 ಕಪ್ ಮೈದಾ ಹಿಟ್ಟು
* 1 ಚಮಚ ಉಪ್ಪು
* 1 ಚಮಚ ಬೇಕಿಂಗ್ ಸೋಡ
* 3 ಮೊಟ್ಟೆಗಳು
* 2 1/4 ಕಪ್ ಸಕ್ಕರೆ
* 2 ಕಪ್ ತುರಿದ ಕುಂಬಳಕಾಯಿ
* 1 ಚಮಚ ದಾಲ್ಚಿನ್ನಿಪುಡಿ
* 1/2 ಶುಂಠಿ ಪುಡಿ
* 1/2 ಜಾಯಿಕಾಯಿ ಪುಡಿ
* 1/4 ಲವಂಗ ಪುಡಿ
ಮೊದಲು ಕುಂಬಳಕಾಯಿಯನ್ನು ತುರಿದುಕೊಂಡು ಅದರಲ್ಲಿರುವ ನೀರನ್ನು ಸೋಸಿ ಪಕ್ಕಕಿಟ್ಟುಕೊಳ್ಳಿ, ಸ್ವಲ್ಪ ಕುಂಬಳಕಾಯಿಯನ್ನು ಮಿಕ್ಸಿಗೆ ಹಾಕಿ ತೆಗೆದಿಟ್ಟುಕೊಳ್ಳಿ. ನಂತರ ಒಂದು ಬೌಲ್ಗೆ ಮೊಟ್ಟೆ, ಸಕ್ಕರೆ ಕುಂಬಳಕಾಯಿ ಮಿಶ್ರಣ ಸ್ವಲ್ಪ ನೀರು ಹಾಕಿ ಮಿಶ್ರಣ ರೆಡಿಮಾಡಿಕೊಳ್ಳಿ, ಅದಕ್ಕೆ ಮೈದಾ ಹಿಟ್ಟು, ಉಪ್ಪು, ಬೇಕಿಂಗ್ ಸೋಡಾ, ದಾಲ್ಚಿನ್ನಿ,ಶುಂಠಿ ,ಜಾಯಿಕಾಯಿ , ಲವಂಗ ಪುಡಿ, ದ್ರಾಕ್ಷಿ, ಗೋಡಂಬಿ, ಸೇರಿಸಿ ಚೆನ್ನಾಗಿ ಕಲಸಿ ನಂತರ ಅದಕ್ಕೆ ತುರಿದಿಟ್ಟಿರುವ ಕುಂಬಳಕಾಯಿ ಸೇರಿಸಿ ಮಿಕ್ಸ್ ಮಾಡಿ ನಂತರ ಓವನ್ನಲ್ಲಿ 40 ನಿಮಿಷ ಇಟ್ಟು ಬಿಸಿ ಮಾಡಿ.. (ಏಜೆನ್ಸೀಸ್)