ಕಳೆದುಹೋಗಿರುವ ನಿಮ್ಮ ಮುಖ್ಯವಾದ ವಸ್ತು ಮರಳಿ ಸಿಕ್ಕರೆ ಖುಷಿ ಪಡುತ್ತಿರಲ್ಲವೇ! ಇಂಥದೊಂದು ಘಟನೆ ಇಲ್ಲಿದೆ ನೋಡಿ....Gold chain

gold chain
Published on

ಬೆಂಗಳೂರು: ನೀವು ಎಲ್ಲದರೂ ನಿಮ್ಮ ಮುಖ್ಯವಾದ ವಸ್ತುವನ್ನು ಕಳೆದು ಕಳೆದುಕೊಂಡು ಬೇಸರದಲಿದ್ದಾಗ, ನಿಮ್ಮದುರೇ ಅ ವಸ್ತು ಪ್ರತ್ಯಕ್ಷವಾದರೆ ಏನಾಗುತ್ತೇ ಹೇಳಿ? ನಿಮಗೆ ಎಲ್ಲಲ್ಲಿದ ಖುಷಿ ಉಂಟಾಗುವುದಂತು ನಿಜ. ಇಂಥದ್ದೊಂದು ಮನಕಲುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೌದು, ಪ್ರಯಾಣದ ವೇಳೆ ತನ್ನ ಬಂಗಾರದ ಸರವನ್ನು(Gold chain) ಕಳೆದುಕೊಂಡಿದ್ದ ಮಹಿಳೆಗೆ ಆಟೋ ಚಾಲಕನೊಬ್ಬ ಅವರ ವಿಳಾಸಕ್ಕೆ ತಂದುಕೊಟ್ಟಿದ್ದಾನೆ. ಈ ಕುರಿತು ಚೈತ್ರಾ ಎಂಬುವವರು ವಿಡಿಯೋ ಮಾಡಿ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್​ ಆಗಿದ್ದು, ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಪ್ರಶಂಶೆಯ ಮಳೆ ಸುರಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಚೈತ್ರ, ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡುವಾಗ ನನ್ನ ಬಂಗಾರದ ಚೈನ್​ ಕಳೆದುಕೊಂಡಿದ್ದೆ. ಇನ್ನೂ ಸಿಗುವುದಿಲ್ಲ ಎಂದು ಬೇಸರಗೊಂಡಿದ್ದೆ. ಆದರೆ, ಇಂದು ಆಟೋ ಚಾಲಕ ಗಿರೀಶ್ ಎಂಬುವವರು ಕಳೆದುಹೋದ ನನ್ನ ಬಂಗಾರದ ಸರವನ್ನು ಮರಳಿಸಿದ್ದಾರೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ. ವಿಡಿಯೋದಲ್ಲಿ ಅವರ ಪರಿಚಯ ಹೇಳಿರುವ ಚೈತ್ರಾ, ನಾನು ಮಹಿಳೆಯರಿಗೆ ಆಟೋ ಚಾಲನೆ ತರಬೇತಿ ನೀಡುತ್ತಿರುವ ತಳಿರು ಸಂಸ್ಥೆ ಮುಖ್ಯಸ್ಥೆ ಎಂದು ತಿಳಿಸಿದ್ದಾರೆ.​ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆಟೋ ಚಾಲಕ ಗಿರೀಶ್​ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಕಾಮೆಂಟ್​ ಬಾಕ್ಸ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ನೆಟ್ಟಿಗರು, ಚೈತ್ರಾ ತಳಿರು ಫೌಂಡೇಶನ್ ಮುಖ್ಯಸ್ಥರಾಗಿದ್ದಾರೆ. ಮಹಿಳೆಯರಿಗೆ ಆಟೋ ರಿಕ್ಷಾ ಡ್ರೈವಿಂಗ್ ತರಬೇತಿ ನೀಡುತ್ತಿದ್ದಾರೆ. ಹೀಗಾಗಿ, ಅವಳ ಒಳ್ಳೆಯ ಕರ್ಮವು ಅವಳ ಚೈನ್​ ಮರಳಿ ಪಡೆಯುವಂತೆ ಮಾಡಿದೆ ಎಂದಿದ್ದಾರೆ.

ಗಿರೀಶ್​ ಅವರಂತಹ ಕೆಲವು ಒಳ್ಳೆಯ ಜನರು ಇನ್ನೂ ಕರ್ನಾಟಕದಲ್ಲಿ ಇದ್ದಾರೆ. ಇದರಿಂದ ಮಳೆಯಾಗುತ್ತಿದೆ. ಹೀಗಾಗಿ, ದೇವರು ಅವನಿಗೆ ಸಹಾಯ ಮಾಡಲಿ ಎಂದು ಹಂಚಿಕೊಂಡಿದ್ದಾರೆ. ಮತ್ತೊಬ್ಬರು ಅವರ ಪ್ರಮಾಣಿಕತೆಯೆ ಅವರನ್ನು ಕರ್ನಾಟಕ್ಕೆ ಪರಿಚಯಿದೆ ಎಂದು ಕೊಂಡಾಡಿದ್ದಾರೆ.(ಏಜೆನೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net