ಭೂತಾಯಿಗೆ ಪೂಜೆ ಸಲ್ಲಿಕೆ

sor hunnime
ಸೊರಬ ತಾಲೂಕಿನ ಗೆಂಡ್ಲಾ ಗ್ರಾಮದಲ್ಲಿ ಜಮೀನಿನಲ್ಲಿ ಪೂಜೆ ಸಲ್ಲಿಸಿದ ಕುಟುಂಬ.
Published on

ಸೊರಬ: ಪಟ್ಟಣ ಸೇರಿ ತಾಲೂಕಿನಾದ್ಯಂತ ಭೂಮಿ ಹುಣ್ಣಿಮೆ ಹಬ್ಬವನ್ನು ಮಂಗಳವಾರ ತಾಲೂಕಿನ ರೈತ ಸಮುದಾಯ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಭೂತಾಯಿಗೆ ಪೂಜೆ ಸಲ್ಲಿಸಿದರು. ಸೂರ್ಯೋದಯಕ್ಕೂ ಮುನ್ನ ಹಲವು ರೈತರು ಜಮೀನುಗಳಿಗೆ ತೆರಳಿ ಚರಗ ಚೆಲ್ಲುವ ಮೂಲಕ ಹಬ್ಬದ ಕಾರ್ಯ ಆರಂಭಿಸಿದರು.

ಮನೆಯಲ್ಲಿ ಮಹಿಳೆಯರು ಸೋಮವಾರ ರಾತ್ರಿಯಿಡೀ ಬುತ್ತಿ, ರೊಟ್ಟಿ, ಚಟ್ನಿ, ಹುರಳಿ, ಬೆಂಡೆ, ಬದನೆಕಾಯಿ ಪಲ್ಯ, ಕೋಸಂಬರಿ, ಹೋಳಿಗೆ, ಸಿಹಿಕಡುಬು, ಚಿತ್ರಾನ್ನ ಬಗೆಬಗೆಯ ಭಕ್ಷೃಗಳನ್ನು ತಯಾರಿಸಿದ್ದರು. ಮರುದಿನ ಹೊಲಗದ್ದೆಗಳಿಗೆ ಎತ್ತಿನ ಗಾಡಿ, ಟಿಲ್ಲರ್, ಟ್ರಾೃಕ್ಟರ್, ಕಾರು ಸೇರಿ ವಿವಿಧ ವಾಹನಗಳ ಮೂಲಕ ತೆರಳಿದರು. ಬೆಳೆಗಳಿಗೆ ಸೀರೆ, ಕುಪ್ಪಸ ತೊಡಿಸಿದರು. ಅರಿಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಹಸಿರುಬಳೆ ತೊಡಿಸಿ ಪೂಜೆ ಸಲ್ಲಿಸಿದರು. ಮನೆಯಿಂದ ತಯಾರಿಸಿ ತಂದ ತಿಂಡಿ ತಿನಿಸುಗಳ ನೈವೇದ್ಯ ಅರ್ಪಿಸಿದರು. ನಂತರ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಭೋಜನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net