ಬಿಸಿಯೂಟದಲ್ಲಿ ಹುಳು ಪತ್ತೆ!

muduvadi
ಮಕ್ಕಳಿಗೆ ಬಡಿಸಲಾಗಿರುವ ಅನ್ನದಲ್ಲಿ ಹುಳು ಪತ್ತೆಯಾಗಿರುವುದು.
Published on

ಕೋಲಾರ: ತಾಲೂಕಿನ ಮುದುವಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಮಧ್ಯಾಹ್ನ ಮಕ್ಕಳಿಗೆ ಉಣಬಡಿಸಿದ ಊಟದಲ್ಲಿ ಹುಳು ಪತ್ತೆಯಾಗಿದ್ದು, ಮಕ್ಕಳಲ್ಲಿ ಆತಂಕ ಉಂಟು ಮಾಡಿದೆ.

ಶಾಲೆಯಲ್ಲಿ ಬಿಸಿಯೂಟ ಯೋಜನೆಯಡಿ ಮಧ್ಯಾಹ್ನ ಅಡುಗೆ ಸಿಬ್ಬಂದಿ ಅನ್ನ, ತರಕಾರಿ ಸಾಂಬಾರು ತಯಾರಿಸಿದ್ದು, ಎಂದಿನಂತೆ ಮಕ್ಕಳಿಗೆ ಊಟ ಬಡಿಸಲಾಗಿದೆ. ತಟ್ಟೆಗೆ ಹಾಕಿಸಿಕೊಂಡಿದ್ದ ಮಕ್ಕಳು ತಿನ್ನಬೇಕು ಅನ್ನುವಷ್ಟರಲ್ಲಿ ಹುಳು ಪತ್ತೆಯಾಗಿದೆ, ಈ ಬಗ್ಗೆ ಮಕ್ಕಳು ಇದೇನು ಎಂದು ಅಡುಗೆ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಹೋಗಿ ಮುಖ್ಯ ಶಿಕರನ್ನು ಕೇಳಿ ಎಂದು ಸಿಬ್ಬಂದಿ ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಮುಖ್ಯಶಿಕಿಗೆ ತೋರಿಸಿದಾಗ "ನಿಮ್ಮ ಮನೆಗಳಲ್ಲಿ ಆದರೆ ಪಕ್ಕಕ್ಕೆ ಎತ್ತಿಹಾಕಿ ಸೇವಿಸುವುದಿಲ್ಲವೇ, ಏನೂ ಆಗಲ್ಲ ತಿನ್ನಿ' ಎಂದು ತಾಕೀತು ಮಾಡಿದ್ದಾರೆ. ಇದಕ್ಕೆ ಕೆರಳಿದ ಮಕ್ಕಳು ಊಟ ಸೇವಿಸದೆ ಹಿಂದೆ ಸರಿದಿದ್ದಾರೆ. ಶಾಲೆಯಲ್ಲಿ ಊಟ ತಯಾರಿಸಲು ಗುಣಮಟ್ಟದ ಆಹಾರ ಸಾಮಗ್ರಿಗಳು ಬರುತ್ತಿಲ್ಲ, ಬಡಿಸುವ ಊಟವೂ ರುಚಿಯಾಗಿಲ್ಲ ಮತ್ತು ಪ್ರಶ್ನೆ ಮಾಡಿದರೆ ಬೆದರಿಸುತ್ತಾರೆ ಎಂದು ವಿದ್ಯಾರ್ಥಿಗಳು ಪಾಲಕರ ಬಳಿ ಅಳಲು ತೋಡಿಕೊಂಡಿದ್ದಾರೆ.

ಕೋಟ್​..

ಮಕ್ಕಳಿಗಾಗಿ ತಯಾರಿಸಲಾಗಿರುವ ಊಟದಲ್ಲಿ ಹುಳು ಪತ್ತೆಯಾಗಿರುವುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮವಹಿಸಲಾಗುವುದು.

- ಮಧುಮಾಲತಿ, ಬಿಇಒ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net