ತಯಾರಾಯ್ತು ವಿಶ್ವದ ಅತ್ಯಂತ ಚಿಕ್ಕ ಕಾರು; ಆದರೆ ನೋಡಿದವರಿಗೆ ಬಂತು ಈ ಅನುಮಾನ

car 2
Published on

ನವದೆಹಲಿ: ತಂತ್ರಜ್ಞಾನ ಬೆಳೆದಂತೆ ಜಗತ್ತಿನಲ್ಲಿ ಅನೇಕ ರೀತಿಯ ಬದಲಾವಣೆ ನೋಡುತ್ತಿದ್ದೇವೆ. ಅದರಲ್ಲೂ ಆಟೋಮೊಬೈಲ್ ಕ್ಷೇತ್ರದಲ್ಲಿ ನಿರಂತರವಾಗಿ ವಿವಿಧ ಬಜೆಟ್‌ಗಳಲ್ಲಿ, ವಿನ್ಯಾಸಗಳಲ್ಲಿ ಬರುತ್ತಿರುವ ಆಟೋಮೊಬೈಲ್‌ಗಳ ಸೃಜನಶೀಲತೆ ಎಲ್ಲರನ್ನೂ ಬೆರಗುಗೊಳಿಸುತ್ತಿದೆ. ಇದೀಗ 'ವಿಶ್ವದ ಅತ್ಯಂತ ಚಿಕ್ಕ ಕಾರಿನ' ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದು, ಈ ಕಾರು ಸಾಮಾಜಿಕ ಮಾಧ್ಯಮದಲ್ಲಿ ಕೆಲವರನ್ನು ಆಕರ್ಷಿಸಿದರೆ, ಮತ್ತೆ ಕೆಲವರಿಗೆ ಇದು ನಿಜಕ್ಕೂ 'ಕಾರು ಇರಬಹುದಾ'? ಎಂಬ ಅನುಮಾನ ವ್ಯಕ್ತವಾಗಿದೆ.

ವೈರಲ್ ಆಗಿರುವ ಈ ವಿಡಿಯೋವನ್ನು ಮಾಸ್ಸಿಮೊ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಸಯಾನ್ ಬಣ್ಣದ ಕಾರು ರಸ್ತೆಯಲ್ಲಿ ಚಲಿಸುತ್ತಿರುವುದನ್ನು ನೋಡಬಹುದು. ನೋಡಿದ ಕೂಡಲೇ ಇದಕ್ಕೆ ಬಾಗಿಲು ಅಥವಾ ಟೈರ್ ಇಲ್ಲದಿರುವುದನ್ನು ನೋಡಿ ಇದನ್ನು ವಾಹನ ಎಂದು ಒಪ್ಪಿಕೊಳ್ಳುವುದು ಕಷ್ಟ. ಆದರೆ ಮುಂಭಾಗದ ಬಾನೆಟ್ ಫ್ಲಾಪ್, ಎಲ್ಲಾ ಬದಿಗಳಲ್ಲಿ ಕಿಟಕಿಗಳನ್ನು ಹೊಂದಿದ್ದು, ರಸ್ತೆಯ ಉದ್ದಕ್ಕೂ ಕಾರು ಸರಾಗವಾಗಿ ಚಲಿಸುತ್ತಿರುವುದರಿಂದ ಕಾರನ್ನು ನೋಡಿದ ಜನರು ಚಕಿತರಾಗಿದ್ದಾರೆ.

ವಿಡಿಯೋವನ್ನು ಯೂಟ್ಯೂಬ್ ಚಾನೆಲ್ ಕ್ಯಾರಮಗೆಡ್ಡನ್ ಹಂಚಿಕೊಂಡಿದ್ದು, ಈ ಕಾರನ್ನು ಈಗ ವಿಶ್ವದ ಅತ್ಯಂತ ಚಿಕ್ಕ ಕಾರು ಎಂದು ಹೇಳಲಾಗುತ್ತಿದೆ. ಕಾರಿನ ಮುಂಭಾಗಕ್ಕೆ GoPro ಕ್ಯಾಮೆರಾವನ್ನು ಸೇರಿಸಲಾಗಿದ್ದು, ಇದು ಯಾವುದೇ ಅಡೆತಡೆಗಳಿಲ್ಲದ ಮಾರ್ಗವನ್ನು ತೋರಿಸುತ್ತದೆ. ವಿಡಿಯೋ ಪೋಸ್ಟ್ ಕೆಳಗೆ "ವಿಶ್ವದ ಅತ್ಯಂತ ಚಿಕ್ಕ ಕಾರು," ಎಂದು ಶೀರ್ಷಿಕೆ ಕೊಡಲಾಗಿದ್ದು, ಈ ವಿಡಿಯೋ ಸದ್ಯಕ್ಕೆ 38 ಮಿಲಿಯನ್ ವೀಕ್ಷಣೆ ಮತ್ತು 11.4 ಲಕ್ಷ ಲೈಕ್ಸ್ ಪಡೆದಿದೆ.

ಹೀಗಿದೆ ನೆಟ್ಟಿಗರ ಪ್ರತಿಕ್ರಿಯೆ
ಕೆಲವು ಬಳಕೆದಾರರು 'ಕಾರಿಗೆ ಗುಂಡಿ ಎದುರಾದಾಗ ಏನಾಗಬಹುದೆಂದು ಯೋಚಿಸುತ್ತಿದ್ದೇವೆ', 'ಇದು ನೋಡಲು ಜಿಟಿಎ ಗ್ಲಿಚ್​​ನಂತೆ ಕಾಣುತ್ತಿದೆ' ಎಂದರೆ ಮತ್ತೆ ಕೆಲವರು 'ಇಂತಹ ಕಾರಿನಿಂದ ಏನು ಉಪಯೋಗ' ಎಂದು ಪ್ರಶ್ನಿಸುತ್ತಿದ್ದಾರೆ'. ಹಾಗೆಯೇ 'ಇದನ್ನು ಮಿಸ್ಟರ್ ಬೀನ್​​ಗಾಗಿ ಮಿಸ್ಟರ್ ಬೀನ್ ಕಂಡುಹಿಡಿದಿರಬೇಕು', 'ಇದು ನೋಡಲು ಅಷ್ಟು ಚೆನ್ನಾಗಿಲ್ಲ' ಎಂದು ಹೆಚ್ಚಾಗಿ ನೆಗೆಟಿವ್ ಕಾಮೆಂಟ್​ಗಳನ್ನು ಕೂಡ ಮಾಡಿದ್ದಾರೆ.

-ಏಜೆನ್ಸಿಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net