ಜೀವನಶೈಲಿ ಬದಲಿಸಿದರೆ ಪಾರ್ಶ್ವವಾಯು ಬರದು

Stroke
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನ ಆಚರಿಸಲಾಯಿತು. ಡಾ. ಎಚ್​.ಅಶೋಕ್​, ಡಾ. ಐ.ಪಿ.ಗಡಾದ್​, ಉದಯಕುಮಾರ್​ ಶೆಟ್ಟಿ, ಡಾ.ವಾಸುದೇವ್​, ಡಾ. ಕೆ.ಸುರೇಶ್​ ಶೆಣೈ, ಡಾ.ನಾಗರತ್ನಾ, ಮಾಲತಿ, ಮಾಲಾಶ್ರೀ ಇತರರಿದ್ದರು.
Published on

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಚ್​.ಅಶೋಕ್​ ಅನಿಸಿಕೆ

ವರ್ಲ್ಡ್​ ಸ್ಟ್ರೋಕ್​ ಡೇ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತದಲ್ಲಿ ಪಾರ್ಶ್ವವಾಯು ಕಾಯಿಲೆಗೆ ಮೃತಪಡುವವರ ಸಂಖ್ಯೆ ಹೆಚ್ಚುತ್ತಿದೆ. ದೇಶದ 1 ಲಕ್ಷದ ಜನಸಂಖ್ಯೆಯಲ್ಲಿ 145 ಜನರು ಹಾಗೂ ಪ್ರತಿ ಒಂದು ನಿಮಿಷದಲ್ಲಿ 3 ಜನ ಈ ಸೋಂಕಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಯವಜನತೆ ತಮ್ಮ ಆಹಾರ ಶೈಲಿ ಮತ್ತು ದೈಹಿಕ ಚಟುವಟಿಕೆಗೆ ಕಾಳಜಿ ಕೊಡಬೇಕಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಚ್​.ಅಶೋಕ್​ ಸಲಹೆ ನೀಡಿದರು.

ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸರ್ವೇಕ್ಷಣಾ ಘಟಕ, ಎನ್​ಸಿಡಿ ವಿಭಾಗ ಉಡುಪಿ, ಕರ್ನಾಟಕ ಮಿದುಳು ಆರೋಗ್ಯಉಪಕ್ರಮದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪಾರ್ಶ್ವವಾಯು ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾಗೃತಿಯ ಅಗತ್ಯತೆ ಇದೆ

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಐ.ಪಿ.ಗಡಾದ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರಲ್ಲಿ ಪಾರ್ಶ್ವವಾಯು ಕಾಯಿಲೆಯ ಕುರಿತಾಗಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದರು.

ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿಗಳಾದ ಡಾ.ವಾಸುದೇವ್​, ಐಎಂಎ ಕರಾವಳಿ ಶಾಖೆ ಉಡುಪಿಯ ಅಧ್ಯಕ್ಷ ಡಾ. ಕೆ.ಸುರೇಶ್​ ಶೆಣೈ, ಸಿಎಸ್​ಐ ಲೋಂಬಾರ್ಡ್​ ಮೆಮೋರಿಯಲ್​ ನರ್ಸಿಂಗ್​ ಕಾಲೇಜ್​ನ ಉಪನ್ಯಾಸಕಿ ಮಾಲತಿ, ಉಡುಪಿ ಕಾಲೇಜ್​ ಆಫ್​ ನರ್ಸಿಂಗ್​ ಉಪನ್ಯಾಸಕಿ ಮಾಲಾಶ್ರೀ ಉಪಸ್ಥಿತರಿದ್ದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಕಾಲಜಿಸ್ಟ್​ ಅಬ್ದುಲ್​ ಸಮದ್​ ಸ್ವಾಗತಿಸಿದರು. ಬ್ರೈನ್​ ಹೆಲ್ತ್​ ಉಪಕ್ರಮದ ಜಿಲ್ಲಾ ಸಂಯೋಜಕಿ ಐಶ್ವರ್ಯಾ ಆರ್​. ವಂದಿಸಿದರು. ಜಿಲ್ಲಾಸ್ಪತ್ರೆಯ ಎನ್​ಸಿಡಿ ವಿಭಾಗದ ಕೌನ್ಸೆಲರ್​ ಮನು ಎಸ್​.ಬಿ. ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಎನ್​ಸಿಡಿ ಮತ್ತು ಕೆಬಿಎಚ್​ಐ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಜಿಲ್ಲಾಸ್ಪತ್ರೆಯ ಡಾ.ನಿಕಿನ್​ ಶೆಟ್ಟಿ ಸ್ಟ್ರೋಕ್​ ಕುರಿತು ಮಾಹಿತಿ ನೀಡಿದರು. ಸಿಎಸ್​ಐ ಲೋಂಬಾರ್ಡ್​ ಕಾಲೇಜ್​ನ ವಿದ್ಯಾರ್ಥಿಗಳು ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶಿಸಿದರು. ಭಿತ್ತಿ ಚಿತ್ರಗಳ ಮೂಲಕ ಅರಿವು ಮೂಡಿಸಲಾಯಿತು. ಸಾರ್ವಜನಿಕರಿಗಾಗಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು.

ಕ್ರೀಡಾ ಮನೋಭಾವ ಮತ್ತು ಜೀವನ ಶೈಲಿಯು ನಮ್ಮ ಸ್ವಾಸ್ಥ$್ಯ ಜೀವನಕ್ಕೆ ಉತ್ತೇಜನ ನೀಡುತ್ತದೆ. ಈ ವರ್ಷದ ಸ್ಟ್ರೋಕ್ ದಿನದ ಘೋಷಣೆಯಂತೆ ಕ್ರೀಡೆಯ ಭಾವನಾತ್ಮಕ ಸಂಬಂದದ ಮೂಲಕ ಸ್ಟ್ರೊಕ್​ ಮೀರಿಸಿ ಜೀವಿಸೋಣ. | ಉದಯಕುಮಾರ್​ ಶೆಟ್ಟಿ. ಕ್ರೀಡಾಪಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net