

ನವದೆಹಲಿ: ನಾರ್ವೆಯನ್ ನೊಬೆಲ್ ಕಮಿಟಿ ನೀಡುವ 2020ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ವರ್ಲ್ಡ್ ಫುಡ್ ಪ್ರೋಗ್ರಾಮ್ (ಡಬ್ಲ್ಯುಎಫ್ಪಿ) ಪಾತ್ರವಾಗಿದೆ.
ಹಸಿವು ನಿವಾರಣೆ ನಿಟ್ಟಿನಲ್ಲಿ ಹಾಗೂ ಸಂಘರ್ಷ-ವಿವಾದಗ್ರಸ್ತ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ನಡೆಸಿ ಪ್ರಯತ್ನಗಳು ಮತ್ತು ಹಸಿವನ್ನು ಸಂಘರ್ಷ ಅಥವಾ ಯುದ್ಧಕ್ಕೆ ಅಸ್ತ್ರವಾಗಿಸುವುದನ್ನು ತಡೆಯುವುದಕ್ಕೆ ವರ್ಲ್ಡ್ ಫುಡ್ ಪ್ರೋಗ್ರಾಮ್ ನಡೆಸಿದ ಕೆಲಸಗಳ ಹಿನ್ನೆಲೆಯಲ್ಲಿ ಈ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. (ಏಜೆನ್ಸೀಸ್)