ಪ್ರಾಥಮಿಕ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಟ್ರಂಪ್ ಮತ್ತು ಬೈಡೆನ್; ರೇಸ್‌ನಿಂದ ಹೊರಗುಳಿಯಲಿದ್ದಾರೆ ನಿಕ್ಕಿ ಹ್ಯಾಲಿ

trump
Published on

ಅಮೆರಿಕ: ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ್ದಾರೆ. ಮಂಗಳವಾರ ನಡೆದ ಪ್ರಾಥಮಿಕ ಚುನಾವಣೆಗಳಲ್ಲಿ ಒಂದು ರಾಜ್ಯವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳನ್ನು ಗೆದ್ದಿದ್ದಾರೆ. ಹಾಗೆಯೇ ಬೈಡೆನ್ ಅವರ ಎದುರಾಳಿ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಪ್ರಾಥಮಿಕ ಚುನಾವಣೆಗಳಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಗೆದ್ದಿದ್ದಾರೆ. ಟ್ರಂಪ್ ಗೆಲುವಿನ ನಂತರ ಅಧ್ಯಕ್ಷೀಯ ರೇಸ್ ನಿಂದ ನಿರ್ಗಮಿಸುವಂತೆ ನಿಕ್ಕಿ ಹ್ಯಾಲೆ ಮೇಲೆ ಒತ್ತಡ ಹೆಚ್ಚಿದೆ. 

ಜೋ ಬೈಡೆನ್ ವರ್ಸಸ್ ಟ್ರಂಪ್

ಸಮೋವಾ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಗಳಲ್ಲಿ ಬೈಡೆನ್ ಗೆಲುವು ಸಾಧಿಸಿದ್ದಾರೆ. ಅಮೇರಿಕ ಮಾಧ್ಯಮ ವರದಿಗಳ ಪ್ರಕಾರ, ಬೈಡೆನ್ ಅವರು ಪ್ರಾಥಮಿಕ ಚುನಾವಣೆಯಲ್ಲಿ ಯಾವುದೇ ಮಹತ್ವದ ಸವಾಲನ್ನು ಎದುರಿಸುತ್ತಿಲ್ಲ ಮತ್ತು ನವೆಂಬರ್‌ನಲ್ಲಿ ಟ್ರಂಪ್ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಬೈಡೆನ್ ಅವರ ವಯಸ್ಸಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಆದರೆ ಅವರು ಈ ಚುನಾವಣೆಯಲ್ಲಿ ಗೆದ್ದ ರೀತಿಯನ್ನು ನೋಡಿದರೆ ಅವರನ್ನು ಬದಲಿಸಲು ಯಾವುದೇ ನಾಯಕರಿಗೆ ಸಾಧ್ಯವಾಗುವುದಿಲ್ಲ ಎಂದು ತೋರುತ್ತದೆ. 

ಮಂಗಳವಾರ ನಡೆದ 15 ರಾಜ್ಯಗಳ ಪ್ರಾಥಮಿಕ ಚುನಾವಣೆಗಳಲ್ಲಿ 11 ರಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದಿದ್ದಾರೆ. ನಿಕ್ಕಿ ಹ್ಯಾಲೆ ವರ್ಮೊಂಟ್‌ನಲ್ಲಿ ಮಾತ್ರ ಗೆದ್ದಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net