ಗೃಹ ಕೈಗಾರಿಕೆ ಪ್ರಗತಿಗೆ ತರಬೇತಿ

ldh seminar
ಲಿಂಗದಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಕೃಷಿ ವಿಜ್ಞಾನಿ ಗಂಗಾಧರಪ್ಪ ಮಾತನಾಡಿದರು. ರತ್ನಮ್ಮ ಮೈಲಾರಪ್ಪ, ಎನ್.ಎಸ್. ನಾಗರಾಜಪ್ಪ, ಸಂತೋಷ್, ಸಂಜೀವ್ ಇತರರಿದ್ದರು.
Published on

ಲಿಂಗದಹಳ್ಳಿ: ಗೃಹ ಕೈಗಾರಿಕೆಗಳನ್ನು ಸುಧಾರಿತ ತಂತ್ರಜ್ಞಾನಗಳೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಬರುವಂತೆ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಕೃಷಿ ವಿಜ್ಞಾನಿ ಗಂಗಾಧರಪ್ಪ ಹೇಳಿದರು.
ಲಿಂಗದಹಳ್ಳಿ ಗ್ರಾಮ ಸಭಾಂಗಣದಲ್ಲಿ ಬುಧವಾರ ಲಿಂಗದಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಪರಾಂಪರಾಗತವಾಗಿ ಕುಲ ಕಸುಬುಗಳನ್ನು ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಹಿಂದುಳಿದ ವರ್ಗಗಳ ಅರ್ಹ ಲಾನುಭವಿಗಳಿಗಾಗಿ ಏರ್ಪಡಿಸಿದ್ದ ಪಾರ್ಥಮಿಕ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತೀಯ ವಿಜ್ಞಾನ ಮತ್ತು ಅಭಿವೃದ್ಧಿ ಸಂಸ್ಥೆಯಿಂದ ರಾಜ್ಯದ 36 ಜಿಲ್ಲೆಗಳ ತಲಾ ಒಂದೊಂದು ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು ಆಯಾ ಗ್ರಾಪಂ ವ್ಯಾಪ್ತಿಯ ಗೃಹ ಕೈಗಾರಿಕೆಗಳಾದ ಬಿದಿರಿನ ಬುಟ್ಟಿ ತಯಾರಿಸುವುದು, ಕುಂಬಾರಿಕೆ , ಕಸುತಿ, ತೋಟಗಾರಿಕೆ, ಕೃಷಿ ಸೇರಿದಂತೆ ಆಯಾ ಭಾಗಗಳಿಗೆ ಸೂಕ್ತವಾದ ಗೃಹ ಕೈಗಾರಿಕೆಗಳನ್ನು ಸುಧಾರಿತ ತಂತ್ರಜ್ಞಾನಗಳೊಂದಿಗೆ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಲಿಂಗದಹಳ್ಳಿ ಗ್ರಾಪಂಯನ್ನು ಭಾರತೀಯ ವಿಜ್ಞಾನ ಸಂಸ್ಥೆ, ಜಿಪಂ ಸಹಯೋಗದಲ್ಲಿ ಈ ಯೋಜನೆಯ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿದೆ. ತರಬೇತಿ ಉಚಿತವಾಗಿ ನೀಡಲಿದ್ದು ಅರ್ಹರೆಲ್ಲರು ಇದರ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಮೈಲಾರಪ್ಪ, ಪಿಡಿಒ ಎನ್.ಎಸ್. ನಾಗರಾಜಪ್ಪ, ಜಿಪಂ ಪ್ರಾಜೆಕ್ಟ್ ಇಂಜಿನಿಯರ್ ಸಂತೋಷ್, ಸಂಜೀವ್, ಗ್ರಾಪಂ ಸದಸ್ಯರಾದ ಎಂ.ಆರ್. ಧನಂಜಯ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಹಿಳಾ ಸ್ವ ಸಹಾಯ ಸಂಘಗಳ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net