ಕಾಮಿರ್ಕರಿಗೆ ವೇತನ ಕೊಡಿಸುವಂತೆ ಆಗ್ರಹಿಸಿ ಪ್ರತಿಭಟನೆ

12-RNR-04
Published on

ರಾಣೆಬೆನ್ನೂರ: ಇಲ್ಲಿಯ ಮೃತ್ಯುಂಜಯ ನಗರದಲ್ಲಿರುವ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿರುವ ಕಾಮಿರ್ಕರಿಗೆ ಮಾಲೀಕರು ವೇತನ ನೀಡದೆ ವಂಚನೆ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಾಮಿರ್ಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರ ನೇತೃತ್ವದಲ್ಲಿ ಗಾಮೆಂಟ್ಸ್​ನ ಕಾಮಿರ್ಕರು ಮಂಗಳವಾರ ನಗರದ ಕಾಮಿರ್ಕ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.

ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಇಲ್ಲಿನ ಸಿದ್ದ ಉಡುಪು ಘಟಕದಲ್ಲಿ ಕೆಲಸ ಮಾಡುತ್ತಿರುವ 80ರಿಂದ 90ಜನ ಮಹಿಳಾ ಕಾಮಿರ್ಕರಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ. ಕೂಲಿ ಕೆಲಸ ಮಾಡಿದ ಕಾಮಿರ್ಕರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಕಾಮಿರ್ಕರು ತಮಗೆ ದುಡಿದ ಹಣ ನೀಡಬೇಕು ಎಂದು ಕೇಳಿಕೊಂಡರು ಘಟಕದ ವ್ಯವಸ್ಥಾಪಕರಿಂದ ಯಾವುದೆ ಉತ್ತರ ದೊರೆಯುತ್ತಿಲ್ಲ.

ಅಲ್ಲದೆ ಈ ಘಟಕ ಬಂದ್​ ಮಾಡಿ ಬೇರೆಡೆ ಹೋಗುವ ಸಿದ್ದತೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಕೂಲಿ ಕೆಲಸ ಮಾಡಿದ ಮಹಿಳೆಯರಿಗೆ ವೇತನ ಕೊಡಿಸುವ ಮೂಲಕ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಕಾಮಿರ್ಕ ನಿರೀಕ್ಷಕ ದೇವೇಂದ್ರಪ್ಪ ಬೀರಾದಾರ ಮನವಿ ಸಲ್ಲಿಸಿದರು.

ಪ್ರಮುಖರಾದ ಮಂಜುನಾಥ ಸಂಭೋಜ, ರಾಜೇಶ ಅಂಗಡಿ, ಮಂಜುನಾಥ ಗುಡ್ಡೆಣ್ಣನವರ, ಬಸವರಾಜ ಮೇಗಳಮನಿ, ಅಂಜಲಿ ಚಲವಾದಿ, ಮಂಜುಳಾ ಇಟಗಿ, ರುಕ್ಸನಾ ಊದಗಟ್ಟಿ, ಶೋಭಾ ಕಮ್ಮಾರ, ಶಿವರಾಜ ಕೈದಾಳ, ಸುರೇಶ ಡಿ.ಎಂ., ಹೊನ್ನಮ್ಮ ಶಿವಣ್ಣನವರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net