ಭಾರತದಲ್ಲಿ ಕೆಲಸ ಮಾಡ ಬಯಸುವವರು ಹಿಂದು ಸಬಲೀಕರಣಕ್ಕೆ ದುಡಿಯಬೇಕು; ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ಸುರೇಶ್​ ಭಯ್ಯಾಜಿ ಜೋಷಿ

SURESH BHAYYAJI JOSHI
Published on

ಪಣಜಿ: ಭಾರತದಲ್ಲಿ ಕೆಲಸ ಮಾಡುವ ಬಯಸುವವರು ಹಿಂದು ಸಬಲೀಕರಣಕ್ಕಾಗಿ ದುಡಿಯಬೇಕು ಎಂದು ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ಸುರೇಶ್​ ಭಯ್ಯಾಜಿ ಜೋಷಿ ಹೇಳಿದ್ದಾರೆ.

"ವಿಶ್ವಗುರು ಭಾರತ; ಆರ್​ಸ್ಎಸ್ ದೃಷ್ಟಿಕೋನ" ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, 2020ಕ್ಕೆ ಭಾರತ ಸೂಪರ್​ ರಾಷ್ಟ್ರವಾಗಲಿದೆ ಎಂದರು.

ಭಾರತದಲ್ಲಿ ಕೆಲಸ ಮಾಡಲಿಚ್ಛಿಸುವವರು ಹಿಂದು ಸಮುದಾಯದ ಜತೆಗೆ ನಡೆಯಬೇಕು. ಏಕೆಂದರೆ ಅನಾದಿಕಾಲದಿಂದ ಭಾರತದ ಏಳು ಬೀಳಿಗಳು ಹಿಂದುಗಳು ಕಂಡಿದ್ದಾರೆ. ಭಾರತ ಎಂದರೆ ಅದು ಹಿಂದು ಸಮುದಾಯವನ್ನು ಒಳಗೊಂಡಿದೆ. ಹಿಂದು ಎಂದರೆ ಭಾರತ ರಾಷ್ಟ್ರದ ಕೇಂದ್ರ ಬಿಂದು ಎಂದು ತಿಳಿಸಿದರು.

ಇಡೀ ಜಗತ್ತು ಹೇಳುತ್ತದೆ 2020ರಲ್ಲಿ ಭಾರತವು ಮಹಾಶಕ್ತಿಯಾಗಲಿದೆ ಎಂದು. ಆದರೆ, 2020 ರಲ್ಲಿ ಭಾರತವು ಸೂಪರ್ ರಾಷ್ಟ್ರ ಆಗಬೇಕು ಎಂದು ಬುದ್ಧಿಜೀವಿಗಳೊಂದಿಗೆ ಸಂವಾದ ನಡೆಸುವಾಗ ನಾನೂ ಹೇಳಿದ್ದು ನನಗೆ ನೆನಪಿದೆ ಎಂದರು.

ಸಮನ್ವಯದ ಹಾದಿಯಲ್ಲಿ ನಡೆಯುವುದನ್ನು ಭಾರತ ವಿಶ್ವಕ್ಕೆ ತಿಳಿಸಬೇಕು. ಭಾರತ ದೇಶ ಮತ್ತು ಹಿಂದುಗಳ ಬಿಟ್ಟರೆ ಬೇರೆ ಯಾರು ಇದನ್ನು ಮಾಡಲಾರರು ಎಂದು ಅಭಿಪ್ರಾಯ ಪಟ್ಟರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಉಪಸ್ಥಿತರಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net