

ಅಳವಂಡಿ: ಮಕ್ಕಳಿಗೆ ವಿಷಯ ಮನ ಮುಟ್ಟುವಂತೆ ಬೋಧನೆ ಮಾಡಬೇಕು ಎಂದು ಡಿಡಿಪಿಐ ಶ್ರೀಶೈಲಪ್ಪ ಬಿರಾದಾರ ಹೇಳಿದರು.
ಸಮೀಪದ ಬಿಸರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿ ಶಾಲೆ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಮಕ್ಕಳು ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಉನ್ನತ ಹುದ್ದೆ ಪಡೆಯಬೇಕು. ಶಿಕ್ಷಕರು ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಶ್ರಮವಹಿಸಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಶಿಕ್ಷಕರಾದ ಶಿವಪ್ಪ ಅಯ್ಯನಗೌಡರ, ಮಂಜುನಾಥ, ಪ್ರಕಾಶ ತಟ್ಟಿ, ಭಾರತಿ, ಶಿಲ್ಪಾ, ಲಕ್ಷ್ಮೀ ಕುಲಕರ್ಣಿ ಇದ್ದರು.