ಉದ್ಯೋಗಿಗಳಿಗೆ ವರ್ಕ್​ ಫ್ರಮ್​ ಹೋಮ್; ಕಂಪನಿಗಳಿಗೆ ನಡುಕ!

Untitled-1
Published on

ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ವರ್ಕ್​ ಫ್ರಮ್ ಹೋಮ್​ ಅವಕಾಶ ನೀಡಿರುವುದರಿಂದ ಬಹಳಷ್ಟು ಉದ್ಯೋಗಿಗಳಿಗೆ ಆರಾಮ್ ಎನಿಸಿದ್ದರೆ, ಹಲವಾರು ಕಂಪನಿಗಳಿಗೆ ಇದು ನಡುಕ ಉಂಟುಮಾಡಿದೆ. ಸಿಸ್ಕೋ ವರದಿ ಈ ವಿಷಯವನ್ನು ಹೊರಗೆಡಹಿದೆ. ವರ್ಕ್​ ಫ್ರಮ್​ ಹೋಮ್​ ಅವಕಾಶ ನೀಡುವುದರಿಂದ ಕಂಪನಿಗಳು ಆತಂಕ ಎದುರಿಸಿವೆ ಎಂಬುದನ್ನು ಈ ವರದಿ ಹೇಳಿದೆ.

ವರ್ಕ್​ ಫ್ರಮ್​ ಹೋಮ್​ ಕಾರಣಕ್ಕೆ ಭಾರತದ ಕಾಲು ಭಾಗಕ್ಕೂ ಅಧಿಕ ಕಂಪನಿಗಳಲ್ಲಿ ಸೈಬರ್​ ಥ್ರೆಟ್​ ಪ್ರಮಾಣ ಶೇ. 25 ಅಧಿಕಗೊಂಡಿದೆ. ಮಾತ್ರವಲ್ಲ ಈ ಕಂಪನಿಗಳಿಗೆ ಸೈಬರ್​ ಸೆಕ್ಯುರಿಟಿ ಸವಾಲಾಗಿ ಪರಿಣಮಿಸಿದ್ದು, ಕಂಪನಿಗಳು ಸೈಬರ್ ಸೆಕ್ಯುರಿಟಿ ಹೆಚ್ಚಿಸಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡುವಂತಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖಗೊಂಡಿದೆ.

ಕರೊನಾ ಬಳಿಕವೂ ಭಾರತದ ಶೇ. 53 ಕಂಪನಿಗಳು ಅರ್ಧಕ್ಕೂ ಹೆಚ್ಚು ಸಿಬ್ಬಂದಿಗೆ ವರ್ಕ್​ ಫ್ರಮ್​ ಹೋಮ್​ನಲ್ಲೇ ಕೆಲಸ ಮಾಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿವೆ. ಆದರೆ ಈ ಸಂದರ್ಭ ರಿಮೋಟ್ ಆ್ಯಕ್ಸೆಸ್​ ಕೊಡಬೇಕಾದ್ದರಿಂದ ಸೈಬರ್​ ಥ್ರೆಟ್​ ಹೆಚ್ಚಿರಲಿದ್ದು, ಆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ. ಶೇ. 77 ಕಂಪನಿಗಳು ಭವಿಷ್ಯದಲ್ಲಿ ತಮ್ಮ ಸೈಬರ್ ಸೆಕ್ಯುರಿಟಿ ಮೇಲೆ ಹೆಚ್ಚಿನ ಬಂಡವಾಳ ಹೂಡಲು ನಿರ್ಧರಿಸಿವೆ ಎಂಬ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net