ಮೋದಿ ಮಾತು ತೆಗೆದುಹಾಕಿದ ರಾಜ್ಯಸಭೆ!

PM modi
Published on

ನವದೆಹಲಿ: ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ಬಳಸಿದ್ದ ಪದವೊಂದನ್ನು ರಾಜ್ಯಸಭೆಯ ಕಡತದಿಂದ ತೆಗೆದು ಹಾಕಿದ ಅಪರೂಪದ ಪ್ರಸಂಗ ಗುರುವಾರ ನಡೆದಿದೆ.

ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್​ಪಿಆರ್) ಸಂಬಂಧ ಮಾತನಾಡಿದ ಮೋದಿ, ಎನ್​ಪಿಆರ್ ಬಗ್ಗೆ ಪ್ರತಿಪಕ್ಷಗಳು ‘ಸುಳ್ಳು’ ಹರಡುತ್ತಿವೆ ಎಂದು ಆಪಾದಿಸಿದ್ದರು. ಸುಳ್ಳು ಪದವನ್ನು ಕಡತದಿಂದ ತೆಗೆಯಲಾಯಿತು. ‘ಸುಳ್ಳು’ ಅಸಂಸದೀಯ ಪದವಾಗಿದೆ ಎಂಬುದು ಅಧಿಕಾರಿಗಳ ವಿವರಣೆ. ಪ್ರ

ತಿಪಕ್ಷ ನಾಯಕ ಕಾಂಗ್ರೆಸ್​ನ ಗುಲಾಂ ನಬಿ ಆಜಾದ್​ರ ಭಾಷಣದಿಂದಲೂ ಒಂದು ಪದವನ್ನು ತೆಗೆದು ಹಾಕಲಾಯಿತು. 2013ರಲ್ಲಿ ರಾಜ್ಯಸಭೆಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಬಳಸಿದ್ದ ಕೆಲ ಪದಗಳನ್ನೂ ಕಡತದಿಂದ ತೆಗೆಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net