

Chiranjeevi Statement: ತೆಲುಗು ಚಿತ್ರರಂಗದ ದಿಗ್ಗಜ, ನಟ ಮೆಗಸ್ಟಾರ್ ಚಿರಂಜೀವಿ ಮಹಿಳೆಯರ ಬಗ್ಗೆ ಕಾಮೆಂಟ್ವೊಂದನ್ನು ಮಾಡಿದ್ದು, ಇದೀಗ ಅವರು ಹಾಡಿದ ಕೆಲ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ತಿಳಿದೋ ತಿಳಿಯದೆ ನಟನ ಮೇಲೆ ವಿವಾದ ಸುತ್ತಿಕೊಂಡಿದೆ.
ಹೌದು, ತಮ್ಮ ಕುಟುಂಬದಲ್ಲಿ ಎಲ್ಲರು ಮಹಿಳೆಯರಿದ್ದು, 'ಮನೆಯಲ್ಲಿ ಮಹಿಳೆಯರ ಹಾಸ್ಟೇಲ್ ವಾರ್ಡನಂತಿದ್ದೇನೆ'. ಹೀಗಾಗಿ, ಮೊಮ್ಮಗ ಬೇಕು ಎಂಬ ಆಸೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ಇದೇ ಹೇಳಿಕೆಗಳಿಗೆ ಇದೀಗ ಆಕ್ಷೇಪ ವ್ಯಕ್ತವಾಗಿದ್ದು, ಚಿರಂಜೀವಿ ಲಿಂಗಭೇದ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಸೇರಿದಂತೆ ಕೆಲವರು ಕಿಡಿ ಕಾರಿದ್ದಾರೆ. ಅಲ್ಲದೇ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
'ಬ್ರಹ್ಮ ಆನಂದಂ' ಚಿತ್ರದ ಫ್ರಿ-ಇವೆಂಟ್ ಕಾರ್ಯಕ್ರಮಕ್ಕೆ ನಟ ಚಿರಂಜೀವಿ ಮುಖ್ಯ ಅಥಿತಿಯಾಗಿ ಆಗಮಿಸಿದ್ದಾರೆ. ಈ ವೇಳೆ ಸ್ಟೇಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಚಿರು, '' ಮನೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಇರುವ ಕಾರಣ 'ಮನೆಯಲ್ಲಿ ಮಹಿಳೆಯರ ಹಾಸ್ಟೇಲ್ ವಾರ್ಡನಂತೆ' ನನಗೆ ಭಾಸವಾಗುತ್ತಿದೆ. ಹೀಗಾಗಿ, ನಮ್ಮ ವಂಶ ಪರಂಪರೆ ಮುಂದುವರೆಯಲು ರಾಮ್ಚರಣ್ಗೆ ಗಂಡು ಮಗು ಜನನ ಆಗಲೆಂದು ನಾನು ಹಾರೈಸುತ್ತೇನೆ, ಹಾರೈಸುತ್ತಲೇ ಇದ್ದೇನೆ. ಆದರೆ, ಸೊಸೆ ಉಪಾಸನ ಮತ್ತೊಮ್ಮೆ ಹೆಣ್ಣಿಗೆ ಜನ್ಮ ನೀಡುತ್ತಾಳೆಯೋ ಎಂಬ ಭಯ ನನಗಿದೆ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಹೊತ್ತಿದೆ.
ಚಿರಂಜೀವಿಗೆ ಶ್ರೀಜಾ ಕೊನಿಡೇಲಾ ಮತ್ತು ಸುಶ್ಮಿತಾ ಕೊನಿಡೇಲಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಶ್ರೀಜಾ ಅವರಿಗೆ ನವಿಷ್ಕಾ ಮತ್ತು ನಿವ್ರತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುಶ್ಮಿತಾ ಅವರಿಗೆ ಸಮರ ಮತ್ತು ಸಂಹಿತಾ ಎಂಬ ಹೆಣ್ಣು ಮಕ್ಕಳಿದ್ದಾರೆ. ಅವರ ಮಗ ರಾಮ್ ಚರಣ್ ಮತ್ತು ಸೊಸೆ ಉಪಾಸನಾ 2023ರ ಜೂ.20 ತಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.(ಏಜೆನ್ಸೀಸ್)