ಮಹಿಳೆಯರು, ಮಕ್ಕಳ ರಕ್ಷಣೆ ಎಲ್ಲರ ಜವಾಬ್ದಾರಿ; ವಿಕಾಸ ಸಂಸ್ಥೆ ಅಧ್ಯಕ್ಷ ಎಂ.ನಾಗರಾಜು ಅನಿಸಿಕೆ.

ನೆಲಮಂಗಲ ತಾಲೂಕಿನ ಹಂಚೀಪುರದಲ್ಲಿ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ವಿಶೇಷ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ.ಜಿ.ಮುನಿರಾಜು ಉದ್ಘಾಟಿಸಿದರು. ವಿಕಾಸ ಸಂಸ್ಥೆ ಅಧ್ಯಕ್ಷ ಎಂ.ನಾಗರಾಜು, ಪಿಡಿಒ ಸುನೀತಾ, ಕಾರ್ಯದರ್ಶಿ ಹನುಮಂತಯ್ಯ ಮತ್ತಿತರರು ಇದ್ದರು.
ನೆಲಮಂಗಲ ತಾಲೂಕಿನ ಹಂಚೀಪುರದಲ್ಲಿ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ವಿಶೇಷ ಗ್ರಾಮಸಭೆಯನ್ನು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ.ಜಿ.ಮುನಿರಾಜು ಉದ್ಘಾಟಿಸಿದರು. ವಿಕಾಸ ಸಂಸ್ಥೆ ಅಧ್ಯಕ್ಷ ಎಂ.ನಾಗರಾಜು, ಪಿಡಿಒ ಸುನೀತಾ, ಕಾರ್ಯದರ್ಶಿ ಹನುಮಂತಯ್ಯ ಮತ್ತಿತರರು ಇದ್ದರು.
Published on

ನೆಲಮಂಗಲ: ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಲಿರುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ವಿಕಾಸ ಸಂಸ್ಥೆ ಅಧ್ಯಕ್ಷ ಎಂ.ನಾಗರಾಜು ತಿಳಿಸಿದರು.

ತಾಲೂಕಿನ ಹಂಚೀಪುರದ ಸರ್ಕಾರಿ ಶಾಲೆ ಆವರಣದಲ್ಲಿ ಸೋಮವಾರ ಗ್ರಾಪಂ ಹಾಗೂ ವಿಕಾಸ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆಯರು ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಅವರ ಸಮಸ್ಯೆ ಆಲಿಸಿ, ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ವಿಶೇಷ ಗ್ರಾಮಸಭೆ ಆಯೋಜಿಸಲಾಗಿದೆ ಎಂದರು.

ಸಮಾಜದಲ್ಲಿ ಹೆಣ್ಣು ಭ್ರ್ರೂಣಹತ್ಯೆ, ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ನಡೆಯುತ್ತಿರುವುದು ಶೋಚನೀಯ. ಈ ಕೃತ್ಯಗಳಿಗೆ ಕಡಿವಾಣ ಬೀಳಬೇಕು. ಜೀವನಪೂರ್ತಿ ತಾಯಿ, ಪತ್ನಿ, ಅಕ್ಕ, ತಂಗಿ, ಸ್ನೇಹಿತೆಯಾಗಿರುವ ಮಹಿಳೆಯರನ್ನು ಗೌರವಿಸಬೇಕಿದೆ ಎಂದರು.

ಪಾಲಕರು, ಶಾಲೆಗಳಲ್ಲಿ ಶಿಕ್ಷಕರು ಕೇವಲ ಅಂಕಗಳಿಕೆ ಪ್ರಾಮುಖ್ಯತೆ ನೀಡುತ್ತಿರುವುದು, ಮಾನವೀಯ ಹಾಗೂ ನೈತಿಕ ಮೌಲ್ಯ ಅರ್ಥ ಮಾಡಿಸಿದಿರುವುದರಿಂದ ಸಮಾಜದಲ್ಲಿ ಕೆಲ ಅನರ್ಥಗಳು ಸಂಭವಿಸುತ್ತಿವೆ. ಆದ್ದರಿಂದ ಹಕ್ಕುಗಳ ಜತೆಗೆ ಕರ್ತವ್ಯ ಮರೆಯಬಾರದು ಎಂದ ಅವರು, ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆಯಲ್ಲಿ ಚರ್ಚೆಯಾಗುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದರು.

ಗ್ರಾಪಂ ಮಾಜಿ ಸದಸ್ಯೆ ಭವಾನಿಶಂಕರ್ ಬೈರೇಗೌಡ ಮಾತನಾಡಿ, ಸಭೆಯಲ್ಲಿ ಸಾರ್ವಜನಿಕರು ಮುಕ್ತವಾಗಿ ಸಮಸ್ಯೆ ಹೇಳಿಕೊಂಡಾಗ ಮಾತ್ರ ಪರಿಹರಿಸಲು ಸಾಧ್ಯ. ಮಹಿಳೆಯರು ಮತ್ತು ಮಕ್ಕಳಿಗೆ ಸಮಾಜದ ಉತ್ತಮ ಸ್ಥಾನಮಾನವಿದ್ದು, ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕು ಎಂದರು.

ಮಹಿಳೆಯರು, ಮಕ್ಕಳಿಗಾಗಿ ವಿಶೇಷ ಹಕ್ಕುಗಳ ಜತೆಗೆ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕು. ಹಕ್ಕುಗಳಿಗೆ ದಕ್ಕೆಯಾದರೆ, ದೌರ್ಜನ್ಯ ನಡೆದರೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ದೂರು ನೀಡಬೇಕು ಎಂದು ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮಮುನಿರಾಜು ತಿಳಿಸಿದರು.

ವಿದ್ಯಾರ್ಥಿಗಳ ಮನವಿ: ಗ್ರಾಪಂ ವ್ಯಾಪ್ತಿಯ ಶಾಂತಿನಗರದಲ್ಲಿ ಶಾಲಾ ಮೈದಾನದ ಕಲ್ಪಿಸಬೇಕು, ಶಾಂತಿನಗರ ಮಲ್ಲರಬಾಣವಾಡಿ, ಹಂಚೀಪುರ ಸೇರಿ ವಿವಿಧ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹರಿಸಬೇಕು. ಸುಮಾರು 130 ವರ್ಷದ ಮಲ್ಲರಬಾಣವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ನೂತನ ಶಾಲಾ ಕಟ್ಟಡ ನಿರ್ಮಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.

ಗ್ರಾಪಂ ಸದಸ್ಯರಾದ ಮಂಜುನಾಥಯ್ಯ, ಮೋಹನ್‌ಗೌಡ, ಡಿ.ಚಿಕ್ಕಣ್ಣ, ಮಹಂತೇಶ್, ಶ್ರೀನಿವಾಸ್, ಗಂಗಾಮಣಿ, ಶೈಲಜಾ, ಜಯಮ್ಮ ಪಟೇಲ್ ವೆಂಕಟೇಶ್, ಪವಿತ್ರಾ ಚಿಕ್ಕಹನುಮೇಗೌಡ, ಗೀತಾ ಚಿಕ್ಕಣ್ಣಸ್ವಾಮಿ, ಮಾಜಿ ಸದಸ್ಯ ಅನ್ನದಾನಯ್ಯ ಕರವಸೂಲಿಗಾರರಾದ ರಾಮಚಂದ್ರಪ್ಪ, ಸಿಂಚನಾ ಕಲಾ ಕೇಂದ್ರ ಟ್ರಸ್ಟ್ ಅಧ್ಯಕ್ಷ ಸಿ.ಎಚ್.ಸಿದ್ದಯ್ಯ, ಕಲಾವಿದರಾದ ಪವನ್‌ಕುಮಾರ್, ನವೀನ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net