

ಉತ್ತರ ಪ್ರದೇಶ: ಇಲ್ಲಿನ ಮಿರತ್ ಪ್ರಾಂತ್ಯದಲ್ಲಿ ಐದು ಬೀದಿ ನಾಯಿ ಮರಿಗಳ(Puppies) ಮೇಲೆ ಪೆಟ್ರೋಲ್ ಸುರಿದು ಜೀವಂತ ಸುಡಲಾಗಿದೆ ಎಂಬ ಆರೋಪದ ಮೇಲೆ ಇಬ್ಬರು ಮಹಿಳೆಯರ ಮೇಲೆ ಪ್ರಕರಣ ದಾಖಲಾಗಿದೆ.
ಇಬ್ಬರು ಆರೋಪಿಗಳನ್ನು ಶೋಭಾ ಮತ್ತು ಆರತಿ ಎಂದು ಗುರುತಿಸಲಾಗಿದೆ. ಪ್ರತಿ ದಿನ ನಾಯಿ ಮರಿಗಳ ಶಬ್ಧದಿಂದ ಬೇಸರಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಅನಿಮಲ್ ಕೇರ್ ಸೋಸೈಟಿಯ ಪ್ರಧಾನ ಕಾರ್ಯದರ್ಶಿ ಅಂಶುಮಾಲಿ ವಶಿಷ್ಠ ಕೊಟ್ಟ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ದೂರಿನ ಪ್ರಕಾರ ನ.05 ರಂದು ಈ ಘಟನೆ ನಡೆದಿದೆ.
ಇನ್ನು ಈ ಘಟನೆ ನಡೆಯುತ್ತಿರುವಾಗ ಸ್ಥಳೀಯರು ಆರೋಪಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಆದರೆ, ಆರೊಪಿಗಳು ಇಬ್ಬರು ಧಮ್ಕಿ ಹಾಕಿದ್ದಾರೆ. ಬಳಿಕ ಪೊಲೀಸರು ಕರೆ ಮಾಡಿ ನಡೆದ ಘಟನೆ ವಿವರಿಸಿದರೂ ಯಾವ ಕ್ರಮಕೈಗೊಂಡಿಲ್ಲ ಎಂದು ಸ್ಥಳಿಯರು ಹೇಳಿಕೆ ನೀಡಿದ್ದಾರೆ. ಕೃತ್ಯದ ಕುರಿತು ಅನಿಮಲ್ ಕೇರ್ ಸೋಸೈಟಿಯ ಪ್ರಧಾನ ಕಾರ್ಯದರ್ಶಿ ಅಂಶುಮಾಲಿ ಸ್ಥಳಕ್ಕೆ ಬಂದ ಮೇಲೆ ದೂರು ದಾಖಲಾಗಿದೆ.
ಇನ್ನು ಠಾಣಾಧಿಕಾರಿ ಜಿತೇಂದ್ರ ಕುಮಾರ್ ಮಾತನಾಡಿ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಸೆಕ್ಷನ್ 325 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಪೂರ್ಣ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
''ದೂರಿನ ಮೇರೆಗೆ ನಾಯಿ ಮರಿಗಳ ಮರೋಣತ್ತರ ಪರಿಕ್ಷೆ ನಡೆಸಲಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ'' ಎಂದು ಎಸ್ಪಿ ಆಯುಷ್ ವಿಕ್ರಮ್ ಹೇಳಿದ್ದಾರೆ.
ಮೂರು ದಿನಗಳ ಹಿಂದೆ ಜನ್ಮ ಪಡೆದ ಐದು ಬೀದಿ ನಾಯಿಗಳ ಮರಿಗಳು ರಾತ್ರಿ ವೇಳೆ ಶಬ್ಧ ಮಾಡುವುದರಿಂದ ನಿದ್ದೆಗೆ ಅಡ್ಡಿ ಆಗುತ್ತಿತ್ತು. ರಾತ್ರಿ ಸಮಯದಲ್ಲಿ ಮರಿಗಳ ಬೊಗಳುವದನ್ನು ಕೇಳಲಾಗದೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದಾಗಿ ಮಹಿಳೆಯರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)