ರಾತ್ರಿ ಪೊಲೀಸ್ ಭದ್ರತೆ ಇಲ್ಲದೆ ಹೋಗಿ ಮೈನಿಂಗ್ ಮಾಫಿಯಾ ತಡೆದ ಮಹಿಳಾ ಅಧಿಕಾರಿ

Oshin
Published on

ಹಿಮಾಚಲಪ್ರದೇಶ: ಯಾವುದೇ ರಾಜ್ಯದಲ್ಲಿ ದೊಡ್ಡ ಅಕ್ರಮ ನಡೆಯುತ್ತಿದ್ದರೆ ಅದನ್ನು ತಡೆಯಲು ಹೋಗುವ ಅಧಿಕಾರಿಗಳು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಹೋಗಿ ಕ್ರಮ ಜರುಗಿಸುವುದು ಸರ್ವೇ ಸಾಮಾನ್ಯ.

ಆದರೆ ಇಲ್ಲೊಂದು ಕಡೆ ಪೊಲೀಸರ ಭದ್ರತೆ ಇಲ್ಲದೆ ದೊಡ್ಡ ಅಕ್ರಮವೊಂದನ್ನು ತಡೆಯಲಾಗಿದೆ. ಅಷ್ಟೇ ಆಗಿದ್ದರೆ ಇದೇನೂ ಅಂಥ ವಿಶೇಷ ಅನಿಸಿರುತ್ತಿರಲಿಲ್ಲ. ಈ ಅಕ್ರಮವನ್ನು ತಡೆದಿದ್ದು ಮಹಿಳಾ ಅಧಿಕಾರಿ ಹಾಗೂ ಇದು ನಡೆದಿದ್ದು ರಾತ್ರಿಯಲ್ಲಿ ಎಂಬುದೇ ಇಲ್ಲಿನ ವಿಶೇಷ.

ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಸಂಧೋಲ್​ನ ಅಸಿಸ್ಟೆಂಟ್ ಕಮಿಷನರ್ ಕಂ ತಹಶೀಲ್ದಾರ್ ಆಗಿರುವ ಒಶಿನ್ ಶರ್ಮಾ ಎಂಬಾಕೆ ಈ ಸಾಹಸ ಮೆರೆದಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಈಕೆ ಸ್ಥಳಕ್ಕೆ ತೆರಳಿ ಕ್ರಮ ಜರುಗಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸ್ ಭದ್ರತೆ ಇಲ್ಲದೆ, ಭಾನುವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಹೋಗಿದ್ದ ಈಕೆ ಅಲ್ಲಿ ನಡೆಯುತ್ತಿದ್ದ ಅಕ್ರಮವನ್ನು ತಡೆದು ದಂಡವನ್ನೂ ವಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net