ಮೈಮೇಲೆ ವಾಹನ ಹರಿದರೂ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದ ಮಹಿಳೆ!

road accident
Published on

ಬೆಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಶಾಲಾ ವಾಹನ ಡಿಕ್ಕಿ ಹೊಡೆದು, ಮೈಮೇಲೆ ಹರಿದರೂ ಮಹಿಳೆ ಪವಾಡದಂತೆ ಪ್ರಾಣಪಾಯದಿಂದ ಪಾರಾಗಿರುವುದು ಇದೀಗ ಅಶ್ಚರ್ಯಕ್ಕೆ ಕಾರಣವಾಗಿದೆ.

ಅಪಘಾತಕ್ಕೆ ಸಿಲುಕಿದ ಮಹಿಳೆಯನ್ನು ರಾಧಮ್ಮ ಎಂದು ಗುರತಿಸಲಾಗಿದ್ದು, ಬೆಂಗಳೂರಿನ ಸೀತಾ ಸರ್ಕಲ್ ಕಡೆಯಿಂದ ವಿದ್ಯಾಪೀಠದ ಮಾರ್ಗದತ್ತ ಬರುತ್ತಿದ್ದ ಶಾಲಾ ವ್ಯಾನ್​ ಮಹಿಳೆಗೆ ಡಿಕ್ಕಿ ಹೊಡೆದಿದೆ. ಅಕ್ಸಿಡೆಂಟ್​​ನಲ್ಲಿ ರಾಧಮ್ಮ ಅವರ ಕಾಲಿನ ಭಾಗಕ್ಕೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಪ್ರಕರಣ ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಮೇಲೆ ವಾಹನ ಹರಿದರೂ ಸಣ್ಣ-ಪುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿರುವುದು ಪವಾಡ ಎಂದೇ ಹೇಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net