ಗ್ಯಾರಂಟಿಗಳಿಂದ ಮಹಿಳಾ ಸಬಲೀಕರಣ

sor sabhe (3)
ಸೊರಬ ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಜಯಶೀಲ ಗೌಡ, ಪ್ರಭಾಕರ, ಡಾ. ಶಶಿಧರ್ ಇದ್ದರು.
Published on

ಸೊರಬ: ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಸರ್ವರ ಏಳಿಗೆಗೆ ರೂಪಿತವಾಗಿವೆ. ತಾಲೂಕಿನಲ್ಲಿಯೂ ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲ ಗೌಡ ಹೇಳಿದರು.

ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನಡೆಸುವಲ್ಲಿ ಯೋಜನೆಗಳು ಪ್ರಮುಖ ಪಾತ್ರ ವಹಿಸಲಿವೆ. ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಅನುಕೂಲವಾಗಿವೆ ಎಂದರು.

ಶಕ್ತಿ ಯೋಜನೆ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಕೇಳಿಬರುತ್ತಿವೆ. ಸಾಗರ ವಿಭಾಗೀಯ ವ್ಯವಸ್ಥಾಪಕರನ್ನು ಮುಂದಿನ ಸಭೆಗೆ ಕರೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ತಾಪಂ ಇಒ ಡಾ. ಶಶಿಧರ್ ತಿಳಿಸಿದರು.

ಗ್ಯಾರಂಟಿ ಜಿಲ್ಲಾ ಸಮಿತಿ ಸದಸ್ಯ ಪ್ರಭಾಕರ, ಸದಸ್ಯರಾದ ಸಂತೋಷ್, ಮಂಜುನಾಥ್, ಮುಕ್ತಿಯಾರ್ ಅಹ್ಮದ್, ರಾಮಪ್ಪ, ಪ್ರವೀಣಕುಮಾರ್, ಚಾಂದ್‌ಸಾಬ್, ಸುಜಾತಾ, ಪಾಂಡು, ಮಂಜುಳಾ, ವಿನಾಯಕ, ಅಧಿಕಾರಿಗಳಾದ ಸತ್ಯಪ್ರಕಾಶ್, ಮಂಜುನಾಥ ನಾಯ್ಕ, ಸುಪ್ರೀತ್, ಭರತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net