

ಚೀನಾದ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಆಗ ತಾನೇ ಹೊಸದಾಗಿ ಕೆಲಸಕ್ಕೆ ಆಯ್ಕೆಯಾಗಿದ್ದ ಯುವತಿಯೊಬ್ಬಳು ತನ್ನ ಬಾಸ್ ಕೊಟ್ಟ ಆದೇಶವನ್ನು ಪಾಲಿಸಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಹೊಸದಾಗಿ ನೌಕರಿ ಪಡೆದ ಯುವತಿಯನ್ನು ತನ್ನ ಕ್ಯಾಬಿನ್ಗೆ ಕರೆದ ಬಾಸ್, ತನಗೆ ಬೆಳಗ್ಗೆಯೇ ಮೊಟ್ಟೆಯ ತಿಂಡಿ ಮತ್ತು ಬಿಸಿ ಬಿಸಿಯಾದ ಕಾಫಿ ತಂದುಕೊಡಬೇಕು ಎಂದು ಆರ್ಡರ್ ಮಾಡಿದ್ದ. ಇದಕ್ಕೆ ನಿರಾಕರಿಸಿದ್ದ ಉದ್ಯೋಗಿ ವಿರುದ್ಧ ಸಿಡಿದೆದ್ದ ಆತ, ತಕ್ಷಣವೇ ಆಕೆಯನ್ನು ಕೆಲಸದಿಂದ ಕಿತ್ತುಬಿಸಾಡಿ, ಮನೆಗೆ ಹೋಗುವಂತೆ ಹೇಳಿದ್ದಾನೆ. ಲೌ ಶಾಂಘೈನ ಮಹಿಳಾ ಉದ್ಯೋಗಿ ತನ್ನ ಸಂಸ್ಥೆಯ ಉನ್ನತ ಅಧಿಕಾರಿ ಕೇಳಿದ್ದನ್ನು ಈಡೇರಿಸಲಿಲ್ಲ ಎಂದು ಕಾರಣಕ್ಕೆ ಕೆಲಸ ಕಳೆದುಕೊಂಡ ಘಟನೆ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಉದ್ಯೋಗಿಯ ಬಾಸ್ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಬಾಸ್ ಮಾತಿನಿಂದ ಸಿಟ್ಟಿಗೆದ್ದ ಯುವತಿ, ಈ ವಿಷಯವನ್ನು ನೇರವಾಗಿ ಹೆಚ್ಆರ್ ಬಳಿ ವಿವರಿಸಲು ಹೋಗಿದ್ದಾಳೆ. ಆದ್ರೆ, ಅಲ್ಲಿಯೂ ಆಕೆಯ ಮಾತನ್ನು ಯಾರು ಕೇಳಿಸಿಕೊಂಡಿಲ್ಲ. ಬದಲಿಗೆ, ನಿನಗೆ ಯಾವುದೇ ಸಂಬಳ ಕೊಡುವುದಿಲ್ಲ. ಈ ಕೂಡಲೇ ಕೆಲಸ ಬಿಟ್ಟು ಹೊರಡು ಎಂದು ಬಲವಂತದಿಂದ ಹೊರಹಾಕಿದ್ದಾರೆ ಎಂದು ಅಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ,(ಏಜೆನ್ಸೀಸ್).