ಕಣ್ಣೆದುರು ಇಬ್ಬರು ಸಾಯುತ್ತಿದ್ದರೂ ರಕ್ಷಿಸಲು ಸಾಧ್ಯವಾಗದೇ ಅಸಹಾಯಕರಾದ್ರು!

Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಕೋಟಗಲ್ ಕೆರೆಯಲ್ಲಿ ಬಟ್ಟೆ ಒಗೆಯುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಮಹಿಳೆ ಮತ್ತು ಆಕೆಯ ಸಹೋದರಿಯ ಮಗ ಮೃತಪಟ್ಟಿದ್ದಾರೆ.

ಬೆಂಗಳೂರಿನ ಯಲಹಂಕ ಸಮೀಪದ ಭದ್ರಪ್ಪ ಲೇಜೌಟ್ ನ ಅನಿತಾ (26), ಈಕೆಯ ಸಹೋದರಿಯ ಮಗ ಗಗನ್ (10) ಮೃತರು. ಕೋಟಗಲ್ ಗ್ರಾಮದಲ್ಲಿನ ಅಕ್ಕ ಹೇಮಾವತಿ ಮನೆಗೆ ಗುರುವಾರ ಅನಿತಾ ಬಂದಿದ್ದಳು. ಶುಕ್ರವಾರ ಆಕೆಯು ಸಹೋದರಿ ಮಗನನ್ನು ಕೋಟಗಲ್ ಕೆರೆಗೆ ಬಟ್ಟೆ ಒಗೆಯಲು ಕರೆದುಕೊಂಡು ಹೋಗಿದ್ದಳು. ಇದೇ ವೇಳೆ ಬಾಲಕ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಈತನನ್ನು ರಕ್ಷಿಸಲು ಹೋಗಿ ಅನಿತಾ ಸಹ ಮೃತಪಟ್ಟಿದ್ದಾಳೆ. ಸಮೀಪದಲ್ಲಿಯೇ ಇದ್ದ ಮಹಿಳೆಯರಿಗೆ ಈಜು ಬಾರದ ಹಿನ್ನೆಲೆಯಲ್ಲಿ ಅಸಹಾಯಕರಾಗಿ ಇಬ್ಬರು ಮುಳುಗುತ್ತಿರುವುದನ್ನು ನೋಡಿ ಕಿರುಚಿಕೊಂಡಿದ್ದಾರೆ. ಪ್ರಾಣವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಈಜುಪಟುಗಳು ಬರುವಷ್ಟರಲ್ಲಿ ಇಬ್ಬರು ಮುಳುಗಿ ಹೋಗಿದ್ದರು.


ಮೃತರ ಮರಣೋತ್ತರ ಪರೀಕ್ಷೆಯನ್ನು ಚಿಂತಾಮಣಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net