ನಟಿಯ ಜತೆ ಸೆಲ್ಫಿ ಕ್ಲಿಕ್ಕಿಸುವಾಗ ಮಹಿಳೆಗೆ ಕಾದಿತ್ತು ಶಾಕ್! ಅಪಾಯದಿಂದ ಪಾರು, ವಿಡಿಯೋ ವೈರಲ್​

Selfie
Published on

ತಿರುವನಂತಪುರಂ: ನೆಚ್ಚಿನ ಸಿನಿಮಾ ಕಲಾವಿದರು ಎದುರಿಗೆ ಸಿಕ್ಕಾಗ ಅನೇಕ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ, ಹೊಸ ವಿಡಿಯೋವೊಂದು ವೈರಲ್​ ಆಗುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುವಾಗಲೂ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದನ್ನು ಆ ವಿಡಿಯೋ ಹೇಳುತ್ತಿದೆ.

ಹೌದು, ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಅಭಿಮಾನಿಯೊಬ್ಬರ ಕೂದಲಿಗೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಮಹಿಳಾ ಅಭಿಮಾನಿ ಪಾರಾಗಿದ್ದಾರೆ. ಮಹಿಳೆಯೊಬ್ಬರು ನಟಿ ನಿತ್ಯಾ ದಾಸ್​ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಈ ಘಟನೆ ನಡೆದಿದೆ.

ಬ್ಯೂಟಿ ಪಾರ್ಲರ್​ ಉದ್ಘಾಟಿಸಲು ನಟಿ ನಿತ್ಯಾ ದಾಸ್​ ಅವರು ಕೋಯಿಕ್ಕೋಡ್​ನ ಕೊಡುವಲ್ಲಿ ಏರಿಯಾಗೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ನಿತ್ಯಾ ಅವರೊಂದಿಗೆ ಮಹಿಳೆ ಸೆಲ್ಫಿ ತೆಗೆದುಕೊಳ್ಳುವಾಗ ಇದ್ದಕ್ಕಿದ್ದಂತೆ ಮಹಿಳೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ನಟಿ ಅಲ್ಲಿಂದ ಓಡಿ ಹೋಗಿದ್ದಾರೆ. ಉಳಿದ ಮಹಿಳೆಯರು ಬೆಂಕಿಯನ್ನು ನಂದಿಸಿದರು. ಸ್ವಲ್ಪ ಎಚ್ಚರ ತಪ್ಪಿದ್ದರೂ ಬೆಂಕಿ ಹೆಚ್ಚಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆದರೆ, ಅದೃಷ್ಟವಶಾತ್​ ಮಹಿಳೆಗೆ ಏನು ಆಗಿಲ್ಲ.

ನಟ ಮಾಮುಕ್ಕೋಯ ಅವರೊಂದಿಗೆ ನಿತ್ಯಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಜನರು ನಿತ್ಯಾ ಜೊತೆ ಮಾತನಾಡುವುದು ಮತ್ತು ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಈ ನಡುವೆ ನಟಿಯೊಂದಿಗೆ ಸೆಲ್ಫಿಗೆ ಪೋಸ್ ನೀಡುತ್ತಿದ್ದಾಗ ಹಿಂದೆ ಇದ್ದ ಮೇಣದ ಬತ್ತಿಯಿಂದ ಮಹಿಳೆಯ ಕೂದಲಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯನ್ನು ನೋಡಿದ ಕೂಡಲೇ ನಟಿ ನಿತ್ಯ ಕಿರುಚಾಡುತ್ತಿರುವುದನ್ನು ಕಾಣಬಹುದು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net