2 ವರ್ಷಗಳಿಂದ ಬಲೂನ್​​ನಂತೆ ಉಬ್ಬುತ್ತಿದೆ ಚೀನಾದ ಈ ಮಹಿಳೆಯ ಹೊಟ್ಟೆ; ಇದೊಂದು ನಿಗೂಢತೆ

Woman Belly
Published on

ಈಕೆ ಚೀನಾದ ಮಹಿಳೆ..ಹ್ವಾಂಗ್​ ಗುಕ್ಸಿಯಾನ್ ಎಂದು ಹೆಸರು. ವೈದ್ಯಕೀಯ ಲೋಕಕ್ಕೇ ಸವಾಲಾಗಿದ್ದಾಳೆ. ಒಂದು ನಿಗೂಢ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಹ್ವಾಂಗ್​ ಅವರ ಹೊಟ್ಟೆ ಒಂದೇ ಸಮ ದೊಡ್ಡದಾಗುತ್ತಿದೆ. ಊತವನ್ನು ನಿಯಂತ್ರಿಸಲು ವೈದ್ಯರಿಗೆ ಸಾಧ್ಯವಾಗುತ್ತಿಲ್ಲ. ಕಾರಣವೂ ಗೊತ್ತಾಗುತ್ತಿಲ್ಲ.

ಗುಕ್ಸಿಯನ್​ ಅವರು ಎರಡು ಮಕ್ಕಳ ತಾಯಿ. 121 ಕೆಜಿ ತೂಕ ಹೊಂದಿದ್ದಾರೆ. ಅದರಲ್ಲಿ ಶೇ.36ರಷ್ಟು ಹೊಟ್ಟೆಯ ತೂಕ.

ಈಗ ಎರಡು ವರ್ಷದ ಹಿಂದಿನಿಂದ ಈಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಒಂದೇ ಸಮನೆ ಹೊಟ್ಟೆ ದೊಡ್ಡದಾಗುತ್ತಲೇ ಇದೆ. ಚಿಕಿತ್ಸೆಗಾಗಿ ವೈದ್ಯರ ಮೊರೆ ಹೋಗಿದ್ದಾರೆ. ಆದರೆ ವೈದ್ಯರಿಗೆ ಆಕೆಗೆ ಉಂಟಾಗುವ ನೋವು ಉಪಶಮನ ಮಾಡಲಷ್ಟೇ ಸಾಧ್ಯವಾಗಿದೆ ಹೊರತು ಹೊಟ್ಟೆ ದೊಡ್ಡದಾಗಿರುತ್ತಿರುವುದನ್ನು ನಿಯಂತ್ರಿಸಲು ಇದುವರೆಗೂ ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕೋವಿಡ್​19: ಮರಣ ದರ ತಗ್ಗಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯಗಳಿಗೆ ಕೇಂದ್ರದ ಸೂಚನೆ

ಹ್ವಾಂಗ್ ಇದೀಗ ತಜ್ಞ ವೈದ್ಯರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಪಡೆಯಲು ಆಕೆಯಲ್ಲಿ ಸಾಕಷ್ಟು ಹಣವಿಲ್ಲ. ಹಾಗಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ. ಹಣ ನೀಡಲು ಕೋರುತ್ತಿದ್ದಾರೆ.

ಇದಕ್ಕೂ ಮೊದಲು ಹ್ವಾಂಗ್​​​ಗೆ ತಪಾಸಣೆ ಮಾಡಿದ ವೈದ್ಯರು, ಆಕೆಗೆ ಪಿತ್ತಜನಕಾಂಗದ ಸಿರೋಸಿಸ್​, ಅಂಡಾಶಯದ ಕ್ಯಾನ್ಸರ್​, ಗಡ್ಡೆ, ಹೊಟ್ಟೆ ಮತ್ತು ಎದೆಯಲ್ಲಿ ಅಸಹಜ ದ್ರವ ಸೋರಿಕೆಯಿಂದ ಹೀಗಾಗುತ್ತಿದೆ. ಹೀಗೆ ಮೂರ್ನಾಲ್ಕು ಕಾರಣಗಳನ್ನು ಊಹಿಸಿದ್ದರೂ ಕೂಡ, ನಿಖರವಾಗಿ ಯಾರೂ ಏನೂ ಹೇಳಿರಲಿಲ್ಲ. ಹೊಟ್ಟೆಯಾಕೆ ಬಲೂನ್​ ತರ ಉಬ್ಬುತ್ತಿದೆ ಎಂಬುದಕ್ಕೆ ಸರಿಯಾದ ಕಾರಣವೇನು ಎಂದು ವೈದ್ಯರಿಗೂ ಗೊತ್ತಾಗಲಿಲ್ಲ. ಇದನ್ನೂ ಓದಿ: 56 ಕೋಟಿ ರೂ. ಬಿಡುಗಡೆ ಮಾಡಿದ್ರೂ ದೆಹಲಿ ವಿವಿ ಸಿಬ್ಬಂದಿಗೆ ಸಂಬಳ ಪಾವತಿ ಏಕಾಗುತ್ತಿಲ್ಲ? ಸಿಸೋಡಿಯಾ ಬಿಚ್ಚಿಟ್ಟ ಸ್ಫೋಟಕ ಮಾಹಿತಿ

ನಾನು ನನ್ನ ಮನೆಕೆಲಸಗಳನ್ನೆಲ್ಲ ತುಂಬ ಬೇಗವಾಗಿ ಮಾಡುತ್ತಿದ್ದೆ. ಆದರೆ ಇದೀಗ ನನ್ನ ಅತ್ಯಂತ ದೊಡ್ಡ ಹೊಟ್ಟೆಯಿಂದಾಗಿ ಜೀವನವನ್ನು ಸಹಜವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ನನ್ನ ಮಕ್ಕಳಿನ್ನೂ ಚಿಕ್ಕವರು. ಈಗ ಅವರ ಅಜ್ಜ-ಅಜ್ಜಿ ನೋಡಿಕೊಳ್ಳುತ್ತಿದ್ದಾರೆ. ನಾನು ಖಂಡಿತ ಗುಣಮುಖಳಾಗುತ್ತೇನೆ ಎಂಬ ಭರವಸೆ ಇದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net