

UP Woman: ಉತ್ತರ ಪ್ರದೇಶದ ಮಹಿಳೆಯೊಬ್ಬಳು ಏಳು ವರ್ಷದ ಮಗಳನ್ನು ತನ್ನ ಲಿವ್-ಇನ್ ಪಾರ್ಟನರ್ ಜೊತೆ ಸೇರಿ ಕೊಲೆ ಮಾಡಿ, ನಂತರ ಇಬ್ಬರೂ ರಾತ್ರಿಯಿಡೀ ಪಾರ್ಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 13ರ ರಾತ್ರಿ ಖುಂದಾರಿ ಬಜಾರ್ನಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ತನ್ನ ತಂದೆಯೊಂದಿಗೆ ಇರಲು ಒತ್ತಾಯಿಸಿದ್ದಾರೆ, ಇದಕ್ಕೆ ಒಪ್ಪದ ಮಗಳ ಮೇಲೆ ಕೋಪಗೊಂಡ ಆರೋಪಿ ಮಹಿಳೆ ರೋಶ್ನಿ ಮತ್ತು ಆಕೆಯ ಪ್ರಿಯಕರ ಉದಿತ್, ಬಾಲಕಿಯನ್ನು ಹೊಡೆದು ಕೊಂದು ಹಾಕಿದ್ದಾರೆ.
ಅಪರಾಧ ಎಸಗಿದ ನಂತರ ಇಬ್ಬರೂ ಲಕ್ನೋದಾದ್ಯಂತ ಪಾರ್ಟಿ ಮಾಡಿ, ಹುಸೈನ್ಗಂಜ್ನಲ್ಲಿರುವ ಹೋಟೆಲ್ನಲ್ಲಿ ತಂಗಿದ್ದರು, ಆದರೆ ಮಗುವಿನ ಶವವನ್ನು ಮನೆಯಲ್ಲಿ ಮರೆಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗೆ ಹಿಂದಿರುಗಿದ ನಂತರ, ರೋಶ್ನಿ ಮತ್ತು ಉದಿತ್ ಕೊಳೆಯುತ್ತಿರುವ ದೇಹದಿಂದ ಬರುತ್ತಿದ್ದ ದುರ್ವಾಸನೆಯನ್ನು ಎಸಿ ಮತ್ತು ಏರ್ ಫ್ರೆಶ್ನರ್ಗಳಿಂದ ತಡೆಯಲು ಪ್ರಯತ್ನಿಸಿದರು ಆದರೆ ಯಾವುದೇ ಪ್ರಯೋಜನವಾಗದೆ, ಪೊಲೀಸ್ಗೆ ಕರೆ ಮಾಡಿ, ತಮ್ಮ ಮಗಳನ್ನು
ತನ್ನ ಗಂಡ ಕೊಲೆ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದರು.
ಸಿಸಿಟಿವಿ ದೃಶ್ಯಾವಳಿಗಳು, ಕರೆ ದಾಖಲೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳು ಘಟನೆಗಳ ಬಗ್ಗೆ ಅವರ ಹೇಳಿಕೆಗಳಿಗೆ ವಿರುದ್ಧವಾಗಿದ್ದರಿಂದ ಪೊಲೀಸರು ರೋಶ್ನಿ ಮತ್ತು ಉದಿತ್ ಅವರನ್ನು ಬಂಧಿಸಿದರು. ಸಹ ಆರೋಪಿ ಉದಿತ್ ಜೈಸ್ವಾಲ್ ತಮ್ಮ ತಪ್ಪೊಪ್ಪಿಕೊಂಡಾಗ ನಿಜವಾದ ಸಂಗತಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟುವಿಕೆ ಸಾವಿಗೆ ಕಾರಣ , ಶವಪರೀಕ್ಷೆಗೆ 36 ರಿಂದ 48 ಗಂಟೆಗಳ ಮೊದಲು ಕೊಲೆ ನಡೆದಿದೆ ಎಂದು ವೈದ್ಯರು ದೃಢಪಡಿಸಿದರು. (ಏಜೆನ್ಸೀಸ್)