

ಪಣಜಿ: ಕೆಲ ವರ್ಷ ಪ್ರೀತಿಸಿದ ಯುವತಿಯನ್ನು ಗೋವಾಗೆ ಕರೆದುಕೊಂಡು ಹೋಗಿ ಕೊಲೆಗೈದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಕಿಶನ್ ಕಲಂಗುಡ್ಕರ್ (26) ಬಂಧಿತ ಆರೋಪಿಯಾಗಿದ್ದಾನೆ. ಈತ ದಕ್ಷಿಣ ಗೋವಾದ ವೆಲ್ಸೋನ್ ಬೀಚ್ಗೆ ಕರೆದೊಯ್ದು ಹತ್ಯೆ ಮಾಡಿದ್ದಾನೆ. ಮಹಿಳೆಯ ಶವ ಪತ್ತೆಯಾದ್ದರಿಂದ ತನಿಖೆಯ ಬೆನ್ನತ್ತಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.
ಕಾಲೇಜು ದಿನಗಳಲ್ಲೇ ಇಬ್ಬರು ಪ್ರೀತಿಸುತ್ತಿದ್ದರು, ಕೆಲದಿನಗಳ ಕಾಲ ಈಕೆ ಈತನ ಜತೆ ಸಂಪರ್ಕ ಹೊಂದಿರಲಿಲ್ಲ. ಇದರಿಂದ ಕೋಪಗೊಂಡ ಈ ಯುವಕ ಯುವತಿಯನ್ನು ಗೋವಾ ಬೀಚ್ಗೆ ಹೋಗುವುದಾಗಿ ಹೇಳಿದ್ದಾನೆ. ಇವನ ಮಾತು ನಂಬಿದ ಆಕೆ ಬಂದಿದ್ದು, ಗೋವಾ ಬೀಚ್ಗೆ ಬರುತ್ತಿದ್ದಂತೆ ಆಕೆಯನ್ನು ಕೊಲೆ ಮಾಡಿ ಬಿಸಾಕಿ ಹೋರಟು ಹೋಗಿದ್ದ ಎಂದು ಪೊಲೀಸ್ ಅಧಿಕಾರಿ ಅಭಿಷೇಕ್ ಧಾನಿಯಾ ತಿಳಿಸಿದ್ದಾರೆ.
ಬೀಚ್ಗೆ ಕರೆದುಕೊಂಡ ಬಂದ ಮೇಲೂ ತನ್ನ ಜತೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ. ಈಕೆ ನಿರಾಕರಿಸಿದ್ದರಿಂದ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಪ್ರಕರಣ ನಡೆದು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)