ಹೊಸ ಸೀರೆ ಕೊಡಿಸಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯುವತಿ! | New Saree

Untitled design - 2025-08-06T213227.281
Published on

New Saree: ಕಾಲೇಜಿನ ಕಾರ್ಯಕ್ರವೊಂದಕ್ಕೆ ಹೊಸ ಸೀರೆ ಕೊಡಿಸಿಲ್ಲ ಎಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶ ಧರ್ಮವರಂ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ಪಿಯುಸಿ ವಿದ್ಯಾರ್ಥಿನಿ ಗಟ್ಟು ಉಷಾರಾಶಿ(16) ಮೃತೆ. ಕಾಲೇಜಿನ ಕಾರ್ಯಕ್ರಮವಿದ್ದು ಹೊಸ ಸೀರೆ ಕೊಡಿಸುವಂತೆ ಉಷಾ, ತಂದೆ ಶ್ರೀರಾಮುಲು ಮತ್ತು ತಾಯಿ ಭಾಗ್ಯಲಕ್ಷ್ಮೀಗೆ ಬೇಡಿಕೆ ಇಟ್ಟಿದ್ದಳು. ಆರ್ಥಿಕ ಪರಿಸ್ಥಿತಿ ಕಾರಣದಿಂದ ಸೀರೆ ಕೊಡಿಸಲು ಈಗ ಅಸಾಧ್ಯವಾದ ಮಾತು ಎಂದು ತಾಯಿ ಗದರಿದ್ದಳು. ಇದರಿಂದ ಬೇಸತ್ತ ಉಷಾ ಮನೆಯಲ್ಲಿ ಯಾರು ಇಲ್ಲದ ವೇಳೆ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಥಳೀಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಮಗ್ಗದಿಂದ ಬದುಕು ಸಾಗಿಸುವ ನನ್ನ ಕುಟುಂಬವನ್ನು ಪೋಷಿಸಲು ಸಾಲ ಮಾಡಲಾಗಿದೆ. ಇದಲ್ಲದೆ, ನನ್ನ ಕೆಲಸ ಸೀಮಿತವಾಗಿರುವುದರಿಂದ ಈಗ ಆರ್ಥಿಕ ತೊಂದರೆಗಳು ಇವೆ. ಸೀರೆ ವಿಚಾರಕ್ಕೆ ಇಂತಹ ಕೆಲಸ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಂದೆ ಶ್ರೀರಾಮುಲು ದೂರಿನಲ್ಲಿ ಹೇಳಿದ್ದಾರೆ. ಟು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net