

Sitapura: ಉತ್ತರ ಪ್ರದೇಶದ ಸೀತಾಪುರದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ತನಗಿಂತ 15 ವರ್ಷ ಚಿಕ್ಕವನಾದ ಪತಿಯ ಸೋದರಳಿಯನ ಜೊತೆ ಎರಡು ಮಕ್ಕಳ ತಾಯಿಯಾದ ಮಹಿಳೆ ಅಕ್ರಮ ಸಂಬಂಧ(Affair) ಹೊಂದಿದ್ದು, ಮುಂದುವರೆಸಲು ನಿರಾಕರಿಸಿದ್ದಕ್ಕೆ ಪೊಲೀಸ್ ಠಾಣೆಯಲ್ಲೇ ತನ್ನ ಕೈಯನ್ನು ಕೊಯ್ದುಕೊಂಡಿದ್ದಾಳೆ ಎಂದು ಸೋಮವಾರ(ಅ. 20) ವರದಿಯಾಗಿದೆ.
ದೆಹಲಿಯ ಪೂಜಾ ಮಿಶ್ರಾ ಕೈ ಕೊಯ್ದುಕೊಂಡ ಮಹಿಳೆ. ಕೆಲ ವರ್ಷಗಳ ಹಿಂದೆ ಲಲಿತ್ ಕುಮಾರ್ ಮಿಶ್ರಾ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ಏಳು ಮತ್ತು ಆರು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಕೆಲಸದಲ್ಲಿ ಸಹಾಯ ಮಾಡಲು ಪತಿ ಲಲಿತ್ ಕುಮಾರ್ ತನ್ನ ಸೋದರಳಿಯ ಅಲೋಕ್ ಮಿಶ್ರಾನನ್ನು ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಪೂಜಾ ತನಗಿಂತ 15 ವರ್ಷ ಚಿಕ್ಕವನಾದ ಅಲೋಕ್ ಜೊತೆ ಪೂಜಾ ಸಂಬಂಧ ಬೆಳೆಸಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಪತಿ ಲಲಿತ್ಗೆ ತಿಳಿಯುತ್ತಿದ್ದಂತೆ ಅಲೋಕ್ನನ್ನು ವಾಪಸ್ ಮನೆಗೆ ಕಳುಹಿಸಿದ್ದಾನೆ. ಆದರೆ ಪೂಜಾ ಗಂಡ ಮತ್ತು ಮಕ್ಕಳನ್ನು ಬಿಟ್ಟು ಅಲೋಕ್ ಜೊತೆ ವಾಸ ಮಾಡಲು ಉತ್ತರ ಪ್ರದೇಶದ ಬರೇಲಿಗೆ ಬಂದಿದ್ದಾಳೆ. ಅಲ್ಲಿ ಅವನ ಜೊತೆ ಏಳು ತಿಂಗಳಿನಿಂದ ಒಟ್ಟಿಗೆ ವಾಸ ಮಾಡುತ್ತಿದ್ದರು.
ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದ ಬಳಿಕ ಅಲೋಕ್ ತನ್ನ ಊರಾದ ಸೀತಾಪುರಕ್ಕೆ ತೆರಳಿದ್ದಾನೆ. ಪೂಜಾ ಕೂಡ ಅದೇ ಗ್ರಾಮಕ್ಕೆ ಬಂದಿದ್ದು, ಇಬ್ಬರು ನಡುವಿನ ಜಗಳವನ್ನು ಬಗೆಹರಿಸಲು ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಅಲೋಕ್ ಇನ್ನು ಮುಂದೆ ಪೂಜಾ ಜೊತೆ ಇರಲು ಬಯಸಲ್ಲ ಎಂದಿದ್ದಕ್ಕೆ, ಮನನೊಂದು ಪೂಜಾ ಬ್ಲೇಡ್ ತೆಗೆದುಕೊಂಡ ಕೈಕೊಯ್ದುಕೊಂಡಿದ್ದಾಳೆ ಎನ್ನಲಾಗಿದೆ. ತಕ್ಷಣ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. (ಏಜೆನ್ಸೀಸ್)