

ಕೋಲ್ಕತ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತದ ದಕ್ಷಿಣ ಭಾಗದಲ್ಲಿ ಶನಿವಾರ ಬೆಳಗ್ಗೆ 20 ವರ್ಷದ ಯುವತಿಯೊಬ್ಬಳು ಮಾಜಿ ಪ್ರಿಯಕರನ ಗುಂಡಿನ ದಾಳಿಗೆ ಬಲಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿಯನ್ನು ಅಂತಿಮ ವರ್ಷದ ಡಿಗ್ರಿ ಸ್ಟೂಡೆಂಟ್ ಪ್ರಿಯಾಂಕ ಪುರುಕಯಾಸ್ತಾ ಎಂದು ಗುರುತಿಸಲಾಗಿದೆ. ಮಾಜಿ ಪ್ರಿಯಕರ ಜಯಂತ ಹಲ್ದಾರ್ ಎಂಬಾತ ಕೋಲ್ಕತದ ರೆಜೆಂಟ್ ಪಾರ್ಕ್ ಏರಿಯಾದಲ್ಲಿ ಯುವತಿ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದನ್ನೂ ಓದಿ: ಡ್ರಗ್ಸ್ ಚಟಕ್ಕೆ ಬಿದ್ದು ಹೆತ್ತ ಮಗುವನ್ನೇ ಭಾರಿ ಬೆಲೆಗೆ ಮಾರಿದ ದಂಪತಿ: ಆದ್ರೆ ದೇವರ ಆಟವೇ ಬೇರೆ ಇತ್ತು!
ಬೆಳಗ್ಗೆ 8 ಗಂಟೆ ಸುಮಾರಿಗೆ ಯುವತಿಯನ್ನು ಅವಳ ಮನೆಯ ಸಮೀಪವೇ ತಡೆದು ಏನೂ ಪ್ರಚೋದನೆ ನೀಡಿದ ಬಹಳ ಹತ್ತಿರದಿಂದಲೇ ಶೂಟ್ ಮಾಡಿ ಪರಾರಿಯಾಗಿದ್ದಾನೆ.
ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರಂತೆ ಆದರೆ, ಆರೋಪಿ ಜಯಂತ ಮೊದಲೇ ಮದುವೆಯಾಗಿರುವ ವಿಚಾರವನ್ನು ತಿಳಿದ ಯುವತಿ ಆತನೊಂದಿಗಿನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿದ್ದಾಳೆ. ಇದೇ ಕೊಲೆಗೆ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.
ಆರೋಪಿಯನ್ನು ಬಂಧಿಸಲು ಪೊಲೀಸ್ ಕಾರ್ಯಾಚರಣೆ ಆರಂಭಿಸಿದ್ದು, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. (ಏಜೆನ್ಸೀಸ್) ಇದನ್ನೂ ಓದಿ: ಕಟ್ಟಿಗೆ ತರಲು ಕಾಡಿಗೆ ಹೋದ ಯುವಕನ ತಲೆ-ಕಾಲು ಬಿಟ್ಟು ಅರ್ಧ ದೇಹವನ್ನೇ ತಿಂದ ಸ್ಥಿತಿಯಲ್ಲಿ ಶವಪತ್ತೆ