ಈ ಮಹಿಳೆ ಶೇರಿಂಗ್ ಟ್ಯಾಕ್ಸಿ ಹತ್ತಿದ್ದೇ ತಪ್ಪಾಗಿ ಹೋಯ್ತು!

rape case noida
Published on

ನೋಯ್ಡಾ: ಮಹಿಳೆಯೊಬ್ಬರು ಇಂದು ಉತ್ತರಪ್ರದೇಶದ ನೋಯ್ಡಾದಲ್ಲಿ ಶೇರಿಂಗ್​ ​​ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜೊತೆಯಲ್ಲಿದ್ದ ಮೂವರು ಸಾಮೂಹಿಕ ಅತ್ಯಾಚಾರ ಮಾಡಿರುವ ಭೀಕರ ಘಟನೆ ನಡೆದಿದೆ.

ಆ ಮಹಿಳೆ ಎತ್ಮಾದಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಲ್ಲಿ ಆಕೆ ನೋಯ್ಡಾದಿಂದ ಶೇರಿಂಗ್​ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದರು. ಆಗ ದಾರಿಯಲ್ಲಿ ಹತ್ತಿಕೊಂಡ ಮೂವರು ಹುಡುಗರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದು ಎತ್ಮಾದ್ಪುರ ಬಳಿ ಎಸೆದು ಹೋಗಿದ್ದಾರೆ' ಎಂದು ಉಲ್ಲೇಖಿಸಲಾಗಿದೆ.

ಈ ಬಗ್ಗೆ 'ನಾವು ಪ್ರಕರಣ ದಾಖಲಿಸಿ ಕೊಂಡಿದ್ದು, ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಟೋಲ್‌ನಲ್ಲಿರುವ ಸಿಸಿಟಿವಿಯಲ್ಲಿ ಕಾರು ಸೆರೆಯಾಗಿದ್ದು, ಮೂವರು ಯುವಕರೂ ಸಿಕ್ಕಿಬಿದ್ದಿದ್ದಾರೆ. ತನಿಖೆ ನಡೆಸಲಾಗುತ್ತಿದೆ' ಎಂದು ಆಗ್ರಾದ ಸಿಪಿ ಪ್ರೀತೀಂದರ್ ಸಿಂಗ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net