ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ ಮಹಿಳೆ; ನಡೆದೇ ಹೋಯಿತು ದುರಂತ!

simran
Published on

ಚಿಕ್ಕಮಗಳೂರು : ಮೂರು ತಿಂಗಳ ಹಿಂದಷ್ಟೇ ಮದುಮಗಳಾಗಿ ವೈವಾಹಿಕ ಜೀವನ ಆರಂಭಿಸಿದ್ದ ಯುವತಿಯೊಬ್ಬಳು ಮಸಣದ ಹಾದಿ ಹಿಡಿರುವ ದುರಂತ ನಡೆದಿದೆ. ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದ ನಿವಾಸಿ 22 ವರ್ಷದ ಸಿಮ್ರಾನ್ ​ಮೃತ ದುರ್ದೈವಿ.

ಸಿಮ್ರಾನ್​​ಳ ಪತಿ ಫೈರೋಜ್​ ತನ್ನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದಕ್ಕೆ ಆಕೆಯನ್ನು ನೀರಿನ ಸಂಪ್​​ನಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಸಿಮ್ರಾನ್​ ಕುಟುಂಬಸ್ಥರು ಆರೋಪಿಸಿದ್ದಾರೆ. ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸಿಮ್ರಾನ್ ಪತಿ ಫೈರೋಜ್ ಮತ್ತು ಆಕೆಯ ಅತ್ತೆ-ಮಾವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net