ಆಟೋ ನಿಲ್ಲಿಸುವಂತೆ ಕೇಳಿದ ಮಹಿಳಾ ಪೊಲೀಸ್​ ಅಧಿಕಾರಿಯನ್ನು 120 ಮೀಟರ್​ ಎಳೆದೊಯ್ದ ಚಾಲಕ! Woman Police

Woman Police
Published on

Woman Police : ಮದ್ಯದ ಅಮಲಿನಲ್ಲಿ ಆಟೋ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಮಹಿಳಾ ಸಂಚಾರ ಪೊಲೀಸ್ ಅಧಿಕಾರಿಯನ್ನು ಸುಮಾರು 100 ಮೀಟರ್‌ಗಿಂತಲೂ ಹೆಚ್ಚು ದೂರ ಎಳೆದೊಯ್ದ ಅಜಾಗರೂಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸತಾರಾ ನಗರದ ಕ್ರಾಸಿಂಗ್‌ನಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಭಾಗ್ಯಶ್ರೀ ಜಾಧವ್, ತಪಾಸಣೆಗಾಗಿ ಆಟೋ ನಿಲ್ಲಿಸುವಂತೆ ಸೂಚನೆ ನೀಡಿದರು. ಆದರೆ, ಕುಡಿದು ವಾಹನ ಚಲಾಯಿಸುತ್ತಿದ್ದ ಚಾಲಕ ದೇವರಾಜ್ ಕಾಳೆ, ಭಾರಿ ದಂಡ ತೆರಬೇಕಾಗುತ್ತದೆ ಎಂಬ ಭಯದಿಂದ ಆಟೋ ನಿಲ್ಲಿಸಲು ನಿರಾಕರಿಸಿ, ಸ್ಥಳದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದನು.

ಆಟೋದಲ್ಲಿ ಅಲ್ಲಿಂದ ಪರಾರಿಯಾಗುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತಡೆಯಲು ಅಡ್ಡ ಬಂದಿದ್ದಾರೆ. ಆದರೆ, ಸುಮಾರು 120 ಮೀಟರ್‌ಗಳಷ್ಟು ಆಟೋ ಚಾಲಕ ಅಧಿಕಾರಿಯನ್ನು ಎಳೆದುಕೊಂಡು ಹೋಗಿದ್ದಾನೆ. ಮಹಿಳಾ ಪೊಲೀಸ್​ ಅಧಿಕಾರಿಯನ್ನು ಧರಧರನೇ ಎಳೆದುಕೊಂಡು ಹೋಗುವ ಭಯಾನಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಈ ವೇಳೆ ದಾರಿಹೋಕರು ತಕ್ಷಣ ಕಾರ್ಯಪ್ರವೃತ್ತರಾಗಿ ಆಟೋ ಚಾಲಕನನ್ನು ತಡೆದಾಗ ಆಟೋ ಕೊನೆಗೆ ನಿಂತಿತು. ಬಳಿಕ ದಾರಿಹೋಕರು ಚಾಲಕನನ್ನು ಥಳಿಸಿ ಪೊಲೀಸ್​ ಅಧಿಕಾರಿಯನ್ನು ರಕ್ಷಿಸಿದರು. ನಂತರ ಚಾಲಕನನ್ನು ಪೊಲೀಸರು ಬಂಧಿಸಿದರು.

ಈ ಘಟನೆಯಲ್ಲಿ ಶ್ರೀಮತಿ ಜಾಧವ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net