ಯುವಕನೊಂದಿಗೆ ನಾಪತ್ತೆಯಾಗಿದ್ದ ಯುವತಿ ಪ್ರತ್ಯಕ್ಷ: ದೇವಾಲಯದಲ್ಲಿ ವಿವಾಹವಾಗಿರುವ ವಿಡಿಯೋ ಬಿಡುಗಡೆ

kodagu jan 29 2020
Published on

ಮಡಿಕೇರಿ: ಯುವಕನೊಂದಿಗೆ ನಾಪತ್ತೆಯಾಗಿದ್ದ ಯುವತಿ ಪ್ರತ್ಯಕ್ಷವಾಗಿ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾಳೆ.

ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ನೆಲ್ಯಹುದಿಕೇರಿಯ ದೀಪಕ್ ಎಂಬಾತನೊಂದಿಗೆ ವಿವಾಹವಾಗಿರುವುದನ್ನು ಆಕೆ ವಿಡಿಯೋ ಮಾಡಿ ಸಾಮಾಜಿ ಜಾಲ ತಾಣದಲ್ಲಿ ಅಪ್​ಲೋಡ್​ ಮಾಡಿದ್ದಾಳೆ.
ನನಗೆ 18 ವರ್ಷ ವಯಸ್ಸಾಗಿದೆ. ನಾನು ಇಷ್ಟಪಟ್ಟು ದೀಪಕ್​ ಹಾಗೂ ನಾನು ದೇವಾಲಯದಲ್ಲಿ ವಿವಾಹವಾಗಿದ್ದೇವೆ. ಇನ್ನು ಮುಂದೆ ಇಬ್ಬರು ಒಟ್ಟಾಗಿ ಇರುತ್ತೇವೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಯುವತಿಯ ಪಾಲಕರು ಅಪ್ರಾಪ್ತ ವಯಸ್ಸಿನ ಮಗಳನ್ನು ದೀಪಕ್​ ಅಪಹರಣ ಮಾಡಿದ್ದಾನೆ ಎಂದು ಸಿದ್ದಾಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಅಪ್ರಾಪ್ತ ಯುವತಿಯನ್ನು ಹುಡುಕಿ ಕರೆ ತರಬೇಕು ಎಂದು ಪಾಲಕರು ಗ್ರಾಮಸ್ಥರೊಂದಿಗೆ ಠಾಣೆಗೆ ತೆರಳಿ ಮನವಿ ಮಾಡಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net