ಐ ಡ್ರಾಪ್​ನಲ್ಲೇ ವಿಷ ಬೆರೆಸಿ ಸ್ನೇಹಿತೆಯನ್ನು ಕೊಂದ ಮಹಿಳೆ! ಕೊಲೆಗೂ ಮುನ್ನ ಮಾಡಿದ್ದು ಮಾಡಬಾರದ ಕೆಲಸ

mur
Published on

ವಾಷಿಂಗ್ಟನ್​: ಕೆಲವೊಮ್ಮೆ ಸ್ನೇಹಿತರೇ ಶತ್ರುಗಳಾಗಿಬಿಡುತ್ತಾರೆ. ಅದೇ ರೀತಿ ನಂಬಿಕೆ ಇಟ್ಟುಕೊಂಡಿದ್ದ ಸ್ನೇಹಿತೆಯೇ ಐ ಡ್ರಾಪ್​ನಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಘಟನೆ ಅಮೆರಿಕದ ವಿಸ್ಕಾನ್ಸಿನ್​ನಲ್ಲಿ ನಡೆದಿದೆ. ಕೊಲೆ ಮಾಡುವುದಕ್ಕೂ ಮೊದಲು ಆಕೆ ಮಾಡಿದ ಕೆಲಸದಿಂದಾಗಿ ಇದೀಗ ಸಿಕ್ಕಿಬಿದ್ದಿದ್ದಾಳೆ.

ಜೆಸ್ಸಿ ಕುರ್ಜೆವ್ಸ್ಕಿ ಹೆಸರಿನ ಮಹಿಳೆ ಆರೋಪಿ. ಈಕೆ 2018ರಲ್ಲಿ ತನ್ನ ಸ್ನೇಹಿಯೆಯ ಮನೆಗೆ ಹೋಗಿದ್ದಳು. ಅಲ್ಲಿಗೆ ಹೋದ ಆಕೆ ಪೊಲೀಸರಿಗೆ ಕರೆ ಮಾಡಿದ್ದಾಳೆ. ನನ್ನ ಸ್ನೇಹಿತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅದರಲ್ಲಿ ಆಕೆಯ ದೇಹಕ್ಕೆ ಕಣ್ಣಿನ ಮೂಲಕ ವಿಷ ಸೇರಿರುವುದು ಗೊತ್ತಾಗಿದೆ.

ಅನುಮಾನ ಬಂದ ಪೊಲೀಸರು ಸೂಕ್ಷ್ಮವಾಗಿ ವಿಚಾರಣೆ ನಡೆಸಲಾರಂಭಿಸಿದ್ದಾರೆ. ಆಗ ಸಾಯವುದಕ್ಕೆ ಮೊದಲು ಮಹಿಳೆ ಅಕೌಂಟ್​ನಿಂದ 3 ಲಕ್ಷ ಡಾಲರ್​ ಅನ್ನು ಯಾರೋ ವಿತ್​ಡ್ರಾ ಮಾಡಿರುವುದು ಗೊತ್ತಾಗಿದೆ. ಮಹಿಳೆಯ ಕಣ್ತಪ್ಪಿಸಿ ಆಕೆಯಿಂದ ಚೆಕ್​ಗೆ ಸಹಿ ಹಾಕಿಸಿಕೊಂಡು ಈ ರೀತಿ ಮಾಡಿರುವುದಾಗಿ ತಿಳಿದುಬಂದಿದೆ. ನಂತರ ಆಕೆಯ ಸಂಪರ್ಕದಲ್ಲಿದ್ದವರೆಲ್ಲರನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆಯ ಸ್ನೇಹಿತೆಯೇ ಈ ಕೆಲಸ ಮಾಡಿರುವುದು ಗೊತ್ತಾಗಿದೆ. ಐ ಡ್ರಾಪ್​ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net